ಬೆಂಗಳೂರು: ನಿನ್ನೆಯಿಂದ ಆರಂಭವಾಗಿರುವ ವಿಧಾನಮಂಡಲ ಅಧಿವೇಶನದ ಚಿತ್ರೀಕರಣಕ್ಕೆ ಖಾಸಗಿ ಮಾಧ್ಯಮಗಳ ಮೇಲೆ ಸ್ಪೀಕರ್ ನಿರ್ಬಂಧ ಹೇರಿರುವುದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿವೇಶನಕ್ಕೆ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ: ಸ್ಪೀಕರ್ ತೀರ್ಮಾನಕ್ಕೆ ಹೆಚ್ಡಿಡಿ ಬೇಸರ - ಸ್ಪೀಕರ್ ತೀರ್ಮಾನಕ್ಕೆ ಹೆಚ್ಡಿಡಿ ಬೇಸರ
ವಿಧಾನಮಂಡಲ ಅಧಿವೇಶನದ ಚಿತ್ರೀಕರಣಕ್ಕೆ ಖಾಸಗಿ ಮಾಧ್ಯಮಗಳ ಮೇಲೆ ಸ್ಪೀಕರ್ ನಿರ್ಬಂಧ ಹೇರಿರುವುದಕ್ಕೆ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡ
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನದ ಚಿತ್ರೀಕರಣಕ್ಕೆ ಖಾಸಗಿ ಮಾಧ್ಯಮಗಳಿಗೆ ಅವಕಾಶ ನೀಡದ ಸ್ಪೀಕರ್ ಅವರ ತೀರ್ಮಾನಕ್ಕೆ ನನ್ನ ವಿರೋಧವಿದೆ ಎಂದಿದ್ದಾರೆ.
ಈ ತೀರ್ಮಾನ ಸರ್ಕಾರದ ವರ್ತನೆಯನ್ನ ತೋರಿಸುತ್ತದೆ. ಉದ್ದೇಶ ಪೂರ್ವಕವಾಗಿಯೆ ಪತ್ರಿಕಾ ಸ್ವಾತಂತ್ರ್ಯವನ್ನ ಹರಣ ಮಾಡಲಾಗುತ್ತಿದೆ. ಈ ನಿರ್ಧಾರದ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸುತ್ತದೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.
Last Updated : Oct 11, 2019, 12:52 PM IST