ಕರ್ನಾಟಕ

karnataka

ETV Bharat / state

ಶಾಸಕರ ಅಣತಿಯಂತೆ ಇನ್ಸ್​​ಪೆಕ್ಟರ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ: ಚು.ಆಯೋಗಕ್ಕೆ ದೇವೇಗೌಡರಿಂದ ದೂರು

ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಯಶವಂತಪುರ ಕ್ಷೇತ್ರದ ಮೂವರು ಪೊಲೀಸ್​ ಇನ್ಸ್​​ಪೆಕ್ಟರ್​ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ಎಂದು ಹೆಚ್.ಡಿ.ದೇವೇಗೌಡರು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

hd-deve-gowda-complaint-against-police-inspectors-to-ec
ಶಾಸಕರ ಅಣತಿಯಂತೆ ಪೊಲೀಸ್​ ಇನ್ಸ್ ಪೆಕ್ಟರ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ: ಹೆಚ್.ಡಿ.ದೇವೇಗೌಡ ದೂರು

By

Published : Apr 12, 2023, 7:37 PM IST

Updated : Apr 12, 2023, 10:38 PM IST

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಪೊಲೀಸ್​ ಇನ್ಸ್​​​ಪೆಕ್ಟರ್​​ಗಳು, ಸಹಕಾರ ಸಚಿವರು ಹಾಗೂ ಸ್ಥಳೀಯ ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿರುವುದರಿಂದ ಅವರನ್ನು ಬೇರೆಡೆಗೆ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ತಾವರೆಕೆರೆ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್​​​ ಬಿ.ರಾಮಪ್ಪ ಗುತ್ತೇದಾರ್, ಕಗ್ಗಲೀಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆರ್. ವಿಜಯಕುಮಾರ್ ಹಾಗೂ ತಲಘಟ್ಟಪುರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​​ ಜಗದೀಶ್ ಎನ್. ಅವರು, ಹಾಲಿ ಶಾಸಕರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾರ್ವಜನಿಕರ ಮೇಲೆ ವಿನಾಕಾರಣ ಸುಳ್ಳು ಕೇಸ್‌ಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ. ಅಲ್ಲದೇ, ಸ್ಥಳೀಯ ಶಾಸಕರ ಜೊತೆ ಅವರು ಒಡನಾಟ ಹೊಂದಿದ್ದು, ಶಾಸಕರ ಅಣತಿಯಂತೆ ಮತ್ತು ತಮ್ಮಗಳ ಇಚ್ಛೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯ ಶಾಸಕರ ಪರವಾಗಿ ಕೆಲಸ ಮಾಡುವಂತೆ ಹಾಗೂ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಅಭ್ಯರ್ಥಿ, ಸ್ಥಳೀಯ ಶಾಸಕರಿಗೆ ಮತ ಹಾಕುವಂತೆ ಅಲ್ಲಿನ ನಾಗರೀಕರನ್ನು ಒತ್ತಾಯ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

ಅಧಿಕಾರಿಗಳ ವರ್ತನೆ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರುವ ಸಂಭವವಿರುತ್ತದೆ. ಹಾಗಾಗಿ, ಈ ಮೂವರು ಅಧಿಕಾರಿಗಳನ್ನು ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಯಶವಂತಪುರ ಕ್ಷೇತ್ರದಿಂದ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿ, ಸೂಕ್ತ ಅಧಿಕಾರಿಗಳನ್ನು ಇಲ್ಲಿ ನೇಮಕ ಮಾಡಬೇಕೆಂದು ಕೋರುವುದಾಗಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ ನಿಷೇಧ: ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ

Last Updated : Apr 12, 2023, 10:38 PM IST

ABOUT THE AUTHOR

...view details