ಬೆಂಗಳೂರು: ಮಂತ್ರಿ ಮಾಲ್ ಹಾಗೂ ಮಂತ್ರಿ ವಸತಿ ಸಮುಚ್ಛಯದ ಕಟ್ಟಡ ನೆಲಸಮಗೊಳಿಸದಂತೆ ಹೈಕೋರ್ಟ್ ತಡೆ ನೀಡಿದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ನೆಲಸಮಕ್ಕೆ ಹೈ ಕೋರ್ಟ್ ತಡೆ, ಮಂತ್ರಿ ಮಾಲ್ ವಶಕ್ಕೆ ಪಡೆಯುವ ಸುಳಿವು ನೀಡಿದ ಬಿಬಿಎಂಪಿ - ಹೈಕೋರ್ಟ್ ಮಂತ್ರಿ ಕಟ್ಟಡ ನೆಲಸಮ ವಿಚಾರ
ಮಂತ್ರಿ ಮಾಲ್ ಹಾಗೂ ಮಂತ್ರಿ ವಸತಿ ಸಮುಚ್ಚಯದ ಕಟ್ಟಡ ನೆಲಸಮಗೊಳಿಸದಂತೆ ಹೈಕೋರ್ಟ್ ತಡೆ ನೀಡಿದೆ. ಕಟ್ಟಡ ನೆಲಸಮಗೊಳಿಸಬಾರದು ಎಂದು ಹೇಳಿದ್ದಾರೆ, ಕಟ್ಟಡವನ್ನು ವಶಕ್ಕೆ ಪಡೆಯಬಾರದೆಂದು ಹೇಳಿಲ್ಲ.
ಮಂತ್ರಿ ಮಾಲ್ ಹಾಗೂ ಮಂತ್ರಿ ವಸತಿ ಸಮುಚ್ಚಯದ 4 ಎಕರೆ 29 ಗುಂಟೆ ಬಿಬಿಎಂಪಿ ಜಾಗ ಒತ್ತುವರಿಯಾಗಿರುವುದು ಸರ್ವೇಯಿಂದ ಧೃಢಪಟ್ಟಿದೆ. ಕಟ್ಟಡ ನೆಲಸಮಗೊಳಿಸದಂತೆ ಹೈಕೋರ್ಟ್ ತಡೆ ನೀಡಿದೆ. ಕಟ್ಟಡ ನೆಲಸಮಗೊಳಿಸಬಾರದು ಎಂದು ಹೇಳಿದ್ದಾರೆಯೇ ಹೊರತು, ಕಟ್ಟಡವನ್ನು ವಶಕ್ಕೆ ಪಡೆಯಬಾರದೆಂದು ಏನೂ ಹೇಳಿಲ್ಲ ಎಂದರು.
ಸದ್ಯ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿರುವವರನ್ನು ಖಾಲಿ ಮಾಡಿಸಲಾಗುವುದು. ಈಗಾಗಲೇ ಸರ್ವೇ ನಡೆಸಿ ಆಗಿದೆ. ಈ ಬಗ್ಗೆ ಹೇಳೋದೇನೂ ಬೇಕಾಗಿಲ್ಲ. ಎರಡು ಅಪಾರ್ಟ್ಮೆಂಟ್ ಬ್ಲಾಕ್ನಲ್ಲಿ ವಾಸವಿರುವವರ ಹೆಸರಿನ ಪಟ್ಟಿ ಮಾಡಿಕೊಂಡು, ಅಲ್ಲಿಂದ ಖಾಲಿ ಮಾಡಲು ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಎಂದರು.