ಬೆಂಗಳೂರು: ಪತಿಯನ್ನು ಪುಂಡಪೋಕರಿ ಎಂದು ನಿಂದಿಸಿ ಹಾಗೂ ಪದೇ ಪದೆ ಕರೆ ಮಾಡಿ ಕಿರುಕುಳ ನೀಡುವ ಮೂಲಕ ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಡಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಜಮೀನು ವಿವಾದದ ಸಂಬಂಧ ಮಹಿಳೆಯೊಬ್ಬರ ಪತಿಯನ್ನು ಆರೋಪಿ ಶ್ರೀನಿವಾಸ ರಾಜು ಎಂಬಾತ ಮಾಧ್ಯಮಗಳ ಮುಂದೆ 'ಪುಂಡ ಪೋಕರಿ' ಎಂದು ನಿಂದಿಸಿದ್ದರು. ಇದರಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಶ್ರೀನಿವಾಸ ರಾಜು ವಿರುದ್ಧ ಯಲಹಂಕ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠ ಆದೇಶಿಸಿದೆ.