ಕರ್ನಾಟಕ

karnataka

ETV Bharat / state

ಮೆಟ್ರೋ ಕಾರ್ಮಿಕರಿಗೆ ಸಂಬಳ ಸಮಸ್ಯೆ‌: ಬಿಎಂಆರ್​ಸಿಎಲ್‍ಗೆ ಹೈಕೋರ್ಟ್​ ನೋಟಿಸ್​​ - Metro workers

ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ‌ ಪೀಠ ವಿಚಾರಣೆ ನಡೆಸಿತು.

HC Notice to BMRCL over Salary issue for Metro workers
ಬಿಎಂಆರ್​ಸಿಎಲ್‍ಗೆ ಹೈಕೋರ್ಟ್​ ನೋಟಿಸ್​

By

Published : May 5, 2020, 9:46 PM IST

ಬೆಂಗಳೂರು: ಮೆಟ್ರೋ ರೈಲು ಮಾರ್ಗಗಳ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬಿಎಂಅರ್​ಸಿಎಲ್‍ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ‌ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪಿಯುಸಿಎಲ್ ಪರ ವಕೀಲರು, ಮೆಟ್ರೋ ತನ್ನ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಮತ್ತು ಅವರನ್ನು ಅವರ ಸ್ವಂತ ಊರುಗಳಿಗೆ ಕಳಿಸಿಕೊಡುತ್ತಿಲ್ಲ ಎಂಬ ಆರೋಪಗಳ ಕುರಿತು ಪೀಠಕ್ಕೆ ವಿವರಿಸಿದರು.

ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ರಾಜ್ಯ ಸರ್ಕಾರ ಹಾಗೂ ಬಿಎಂಆರ್​ಸಿಎಲ್‍ಗೆ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆ ವೇಳೆ ವಿವರಣೆ ನೀಡುವಂತೆ ನಿರ್ದೇಶನ ನೀಡಿತು. ಮೆಟ್ರೋ ಯೋಜನೆಯಲ್ಲಿ ತೊಡಗಿರುವ ಬೊಮ್ಮನಹಳ್ಳಿ ಕ್ಯಾಂಪ್‍ನಲ್ಲಿರುವ ಕಾರ್ಮಿಕರಿಗೆ ವೇತನ ಪಾವತಿಸಿಲ್ಲ. ಬಿಹಾರ ಮತ್ತಿತರ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರು ಇಚ್ಛಿಸಿದ್ದರೂ ಅವರ ಸ್ವಂತ ಊರುಗಳಿಗೆ ಕಳಸಿಕೊಡುತ್ತಿಲ್ಲ ಎಂದು ಕಾರ್ಮಿಕರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಬೊಮ್ಮನಹಳ್ಳಿ ಕ್ಯಾಂಪ್‍ನಲ್ಲಿರುವ ಕಾರ್ಮಿಕರಷ್ಟೇ ಅಲ್ಲ, ಮೆಟ್ರೋ ಯೋಜನೆಯ ಎಲ್ಲಾ ಕಾರ್ಮಿಕರಿಗೂ ಇದೇ ರೀತಿಯ ವೇತನ ಮತ್ತಿತರ ಸಮಸ್ಯೆಗಳಿವೆ ಎಂದು ಹೈಕೋರ್ಟ್​ಗೆ ತಿಳಿಸಲಾಗಿದೆ.

ABOUT THE AUTHOR

...view details