ಬೆಂಗಳೂರು : ಇಂಧನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಖಂಡಿಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಅರೆ ಇಷ್ಟೇನಾ ಪೆಟ್ರೋಲ್ ಬಂದಿದ್ದು ಅಂತಾ ಕೋಟ್ಯಂತರ ಜನರು ಅದರಲ್ಲೂ ಮಧ್ಯಮ ವರ್ಗದ ಜನರು ಕೊರಗುತ್ತಲೇ ಇದ್ದಾರೆ ಎಂದಿದ್ದಾರೆ.
ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 100 ಡಾಲರ್ ಇದ್ದಾಗ ಯುಪಿಎ ಸರ್ಕಾರ 70 ರಿಂದ 75 ರೂಪಾಯಿಯಲ್ಲಿ ತೈಲ ಪೂರೈಕೆ ಮಾಡುತ್ತಿತ್ತು. ಆದರೆ, ಈಗ ಬ್ಯಾರಲ್ ಒಂದಕ್ಕೆ 52 ಡಾಲರ್ ಇದ್ದರೂ ಕೂಡ ಪೆಟ್ರೋಲ್ ಬೆಲೆ 100 ರೂ. ನತ್ತ ಮುಖ ಮಾಡಿದೆ. ಈ ಸಂಪತ್ತಿಗೇನಾ ಪ್ರಧಾನಿ ಚೌಕೀದಾರ..?, 18 ಗಂಟೆ ಕೆಲಸ ಮಾಡುತ್ತಾರೆ ಎಂದು ಬಿಂಬಿಸುವುದು? ಎಂದಿದ್ದಾರೆ.