ಕರ್ನಾಟಕ

karnataka

ETV Bharat / state

ತರ್ಕ ರಹಿತವಾದ ರಾತ್ರಿ ಕರ್ಫ್ಯೂ ವಾಪಸ್ ಪಡೆದ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಮಹದೇವಪ್ಪ

ರೂಪಾಂತರಗೊಂಡ ಕೊರೊನಾ ಆತಂಕದ ಹಿನ್ನೆಲೆ ರಾಜ್ಯದಲ್ಲಿ ಹೇರಲು ನಿರ್ಧರಿಸಿದ್ದ ರಾತ್ರಿ ಕರ್ಫ್ಯೂ ಅನ್ನು ರಾಜ್ಯ ಸರ್ಕಾರ ವಾಪಸ್​ ಪಡೆದಿದ್ದಕ್ಕೆ ಮಾಜಿ ಸಚಿವ ಹೆಚ್ ಸಿ ಮಹಾದೇವಪ್ಪ ಸ್ವಾಗತಿಸಿದ್ದಾರೆ.

HC Mahadevappa tweet about Night curfew
ಹೆಚ್ ಸಿ ಮಹಾದೇವಪ್ಪ ಟ್ವೀಟ್

By

Published : Dec 25, 2020, 4:22 AM IST

ಬೆಂಗಳೂರು: ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂವನ್ನು ವಾಪಸ್ ಪಡೆದಿರುವುದನ್ನು ಮಾಜಿ ಸಚಿವ ಹೆಚ್ ಸಿ ಮಹಾದೇವಪ್ಪ ಸ್ವಾಗತಿಸಿದ್ದಾರೆ.

ಹೆಚ್ ಸಿ ಮಹಾದೇವಪ್ಪ ಟ್ವೀಟ್

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತರ್ಕ ರಹಿತವಾದ ರಾತ್ರಿ ಕರ್ಫ್ಯೂವನ್ನು ವಾಪಸ್ ಪಡೆದ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಸರ್ಕಾರವು ಆದಷ್ಟು ಜನರನ್ನು ಆತಂಕಕ್ಕೆ ದೂಡದಂತಹ ಕ್ರಮ ಕೈಗೊಂಡು ಘೋಷಣೆಗಳನ್ನು ಪ್ರಕಟಿಸುವುದು ಈ ಸಂಕಷ್ಟದ ವೇಳೆ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ ಎಂದಿದ್ದಾರೆ.

ವಿವಿಗೆ ಹಣ ನೀಡಿ:

ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಲ್ಲಿ ಇರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ಜಾತಿಯಾಧಾರಿತ ಪ್ರಾಧಿಕಾರಗಳಿಗೆ ಕೋಟಿಗಟ್ಟಲೇ ಹಣಕಾಸನ್ನು ನೀಡುವ ಸರ್ಕಾರಕ್ಕೆ ಆರೋಗ್ಯವಂತ ಸಮಾಜವನ್ನು ಸೃಷ್ಟಿಸುವ ಜ್ಞಾನದ ಕೇಂದ್ರಗಳಾದ ವಿಶ್ವ ವಿದ್ಯಾಲಯಗಳಿಗೆ ಸರಿಯಾಗಿ ಹಣಕಾಸು ಸೌಲಭ್ಯವನ್ನು ಒದಗಿಸದೇ ಕನ್ನಡದ ಮಹತ್ವದ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಂಪಿ ವಿಶ್ವವಿದ್ಯಾಲಯವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.

ಇದನ್ನೂ ಓದಿ : ಗೃಹ ಇಲಾಖೆ ಎಚ್ಚರಿಸಿದ್ದು ಈಗ ಅದು ನಿಜವಾಗಿದೆ: ಯುಟಿ ಖಾದರ್

ಬಾಬಾ ಸಾಹೇಬರು ಹೇಳಿದಂತೆ ಈ ದೇಶವನ್ನು ಕಾಯುವುದು ಜನಪರವಾದ ಜ್ಞಾನಶಕ್ತಿಯೇ ವಿನಃ ಇನ್ನೇನು ಅಲ್ಲ. ಈ ಅಂಶವನ್ನು ತಲೆಯಲ್ಲಿಟ್ಟುಕೊಂಡು ಸರ್ಕಾರವು ಕೂಡಲೇ ವಿಶ್ವವಿದ್ಯಾಲಯ ಸುಗಮವಾದ ಆಡಳಿತಕ್ಕೆ ಅಗತ್ಯವಿರುವ ಅನುದಾನ ಸೌಲಭ್ಯವನ್ನು ಕಲ್ಪಿಸಲು ಆಗ್ರಹಿಸುತ್ತೇನೆ ಎಂದಿದ್ದಾರೆ.

ಹೆಚ್ ಸಿ ಮಹಾದೇವಪ್ಪ ಟ್ವೀಟ್

ABOUT THE AUTHOR

...view details