ಕರ್ನಾಟಕ

karnataka

ETV Bharat / state

ಗುಣಕ್ಕೆ ಮತ್ಸರಪಡುವವರು ನಾಯಕರಾಗಲು ಅಯೋಗ್ಯರು - 'ತೆನೆ'ಸಾರಥಿಗೆ ಹೆಚ್‌ಸಿ ಮಹಾದೇವಪ್ಪ ಟಾಂಗ್‌! - CM

ದಲಿತ ಮುಖಂಡರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಬೇಕು ಎಂದು ಮಾಜಿ ಸಚಿವ ಹೆಚ್​.ಸಿ. ಮಹಾದೇವಪ್ಪ ಮತ್ತೆ ದಲಿತ ಸಿಎಂ ಹುದ್ದೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಮಾಜಿ ಸಚಿವ ಹೆಚ್​ ಸಿ ಮಹಾದೇವಪ್ಪ

By

Published : May 15, 2019, 1:54 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಇದೀಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಜನರ ಮನಸ್ಸಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಅಷ್ಟೇ. ಮುಖ್ಯಮಂತ್ರಿ ಇಲ್ಲವೆಂದರೂ ಅವರು ಜನರಿಗೆ ಮುಖ್ಯಮಂತ್ರಿನೇ ಎಂದು ಮಾಜಿ ಸಚಿವ ಹೆಚ್​.ಸಿ. ಮಹಾದೇವಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡೂ ಪಕ್ಷದ ವರಿಷ್ಠರು ಸೇರಿಕೊಂಡು ಈಗಾಗಲೇ ಮುಖ್ಯಮಂತ್ರಿ ನೇಮಕ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡಲು ಆಗುವುದಿಲ್ಲ. ದಲಿತರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗೂ ಸಹ ಇದೆ. ಆದರೆ, ದಲಿತ ಮುಖಂಡರಿಗೆ ಸಿಎಂ ಆಗುವ ಅವಕಾಶ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಮಾಜಿ ಸಚಿವ ಹೆಚ್​ಸಿ ಮಹಾದೇವಪ್ಪ

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​.ವಿಶ್ವನಾಥ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಗುಣಕ್ಕೆ ಮತ್ಸರ ಪಡೆಯೋರು ಲೀಡರ್ ಆಗವುದಿಲ್ಲ. ಅಂತವರು ಸಾರ್ವಜನಿಕ ಸ್ಥಳದಲ್ಲಿ ಬದುಕಲು ಅರ್ಹರಲ್ಲ. ಸಿದ್ದರಾಮಯ್ಯ ದೇವರಾಜ ಅರಸರ ನಂತರ ಐದು ವರ್ಷ ಪೂರ್ಣ ಆಡಳಿತ ನಡೆಸಿದ ವ್ಯಕ್ತಿ. ಐದು ವರ್ಷ ಅಭಿವೃದ್ಧಿ ಪರವಾದ ಆಡಳಿತ ಕೊಟ್ಟಿದ್ದಾರೆ. ಅವರ ಸರ್ಕಾರದಲ್ಲಿ ಎಸ್ಸಿ - ಎಸ್ಟಿ ನೌಕರರಿಗೆ ಮುಂಬಡ್ತಿ ವಿಚಾರವಾಗಿ ಕಾನೂನನ್ನು ಸಹ ಜಾರಿಗೆ ತರಲಾಗಿತ್ತು ಎಂದು ಸಿದ್ದರಾಮಯ್ಯನವರ ಆಡಳಿತವನ್ನು ಬಣ್ಣಿಸಿದರು.

ABOUT THE AUTHOR

...view details