ಬೆಂಗಳೂರು: ರಾಜ್ಯದ ಐವರು ಜಿಲ್ಲಾ ನ್ಯಾಯಾಧೀಶರನ್ನು ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ನ್ಯಾಯಧೀಶರಾದ ಶಿವಶಂಕರ ಅಮರಣ್ಣವರ, ಎಂ.ಗಣೇಶಯ್ಯ ಉಮಾ, ವೇದವ್ಯಾಸಾಚಾರ ಶ್ರೀಶಾನಂದ, ಹಂಚಾಟೆ ಸಂಜೀವಕುಮಾರ್ ಮತ್ತು ಪದ್ಮರಾಜ ನೇಮಚಂದ್ರ ದೇಸಾಯಿ ಅವರನ್ನು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೇಂದ್ರ ಕಶ್ಯಪ್ ಅವರು ರಾಷ್ಟ್ರಪತಿಗಳ ಆದೇಶಾನುಸಾರ ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.
ಐವರು ನ್ಯಾಯಾಧೀಶರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಕಳೆದ ಏಪ್ರಿಲ್ 20ರಂದು ಶಿಫಾರಸು ಮಾಡಿ ಪತ್ರ ಬರೆದಿತ್ತು. ಅದರಂತೆ ಐವರು ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿದ್ದಾರೆ.