ಕರ್ನಾಟಕ

karnataka

ETV Bharat / state

ಪೋಕ್ಸೋ ಪ್ರಕರಣ: ಸಂತ್ರಸ್ತೆಗೆ ಮಾಹಿತಿ ನೀಡದೇ ಆರೋಪಿಗೆ ಮಂಜೂರು ಮಾಡಿದ್ದ ಜಾಮೀನು ರದ್ದು - ಮಂಡ್ಯದ ವಿಶೇಷ ನ್ಯಾಯಾಲಯ

ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯ ಗಮನಕ್ಕೆ ತಾರದೆ ಮಂಜೂರು ಮಾಡಿದ್ದ ಜಾಮೀನನ್ನು ಹೈಕೋರ್ಟ್​ ರದ್ದುಪಡಿಸಿತು.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Oct 12, 2023, 9:34 PM IST

ಬೆಂಗಳೂರು :ಅತ್ಯಾಚಾರ ಆರೋಪಿಯು ಐಪಿಸಿ ಅಥವಾ ಪೋಕ್ಸೋ ಕಾಯಿದೆ ಅಡಿ ಸಾಮಾನ್ಯ ಅಥವಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಅಧೀನ ನ್ಯಾಯಾಲಯದ ರಿಜಿಸ್ಟ್ರಿಯು ಮಾಹಿತಿದಾರರ/ಸಂತ್ರಸ್ತರು ಅಥವಾ ಅವರ ವಕೀಲರಿಗೆ ಕಾನೂನಿನ ಅನ್ವಯ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಗೆ ಅಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ, ಪ್ರಸ್ತುತದ ಪ್ರಕರಣದಲ್ಲಿ ಸಿಆರ್​ಪಿಸಿ ಸೆಕ್ಷನ್ 439(1ಎ) ಅನುಪಾಲನೆ ಮಾಡಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪಿಯ ಜಾಮೀನು ರದ್ದುಪಡಿಸಿ ಆದೇಶಿಸಿದೆ. ಅಲ್ಲದೆ, ಮಾಹಿತಿದಾರರು ಅಥವಾ ಸಂತ್ರಸ್ತರನ್ನು ಅರ್ಜಿಯಲ್ಲಿ ಭಾಗಿಯಾಗಿಸದಿದ್ದರೂ ಅವರಿಗೆ ಮಾಹಿತಿ ನೀಡುವ ಅಗತ್ಯತೆಯನ್ನು ಪೂರೈಸಬೇಕು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಮಾಹಿತಿದಾರರು/ಸಂತ್ರಸ್ತರನ್ನು ಪ್ರತಿವಾದಿಗಳನ್ನಾಗಿಸಿದರೆ, ಅವರಿಗೆ ನೊಟೀಸ್ ಜಾರಿ ಮಾಡುವ ಕ್ರಮವನ್ನು ನ್ಯಾಯಾಲಯ ಕೈಗೊಳ್ಳಬೇಕು. ಒಂದೊಮ್ಮೆ ಆರೋಪಿಯ ಪರ ವಕೀಲರು ಮಾಹಿತಿದಾರರು ಪ್ರತಿವಾದಿಯನ್ನಾಗಿಸದಿದ್ದರೆ ಜಾಮೀನು ಅರ್ಜಿ ವಿಚಾರಣೆ ನಡೆಸುವ ಪೀಠವು ನೊಟೀಸ್ ಕಳುಹಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಅಲ್ಲದೇ, ಪ್ರಾಸಿಕ್ಯೂಷನ್​ಗೂ ಮಾಹಿತಿದಾರರು ಮಾಹಿತಿ ನೀಡಿರುವ ಕುರಿತಾದ ಹಿಂಬರಹವನ್ನು ಸಲ್ಲಿಸಲು ಆದೇಶಿಸಬೇಕು. ಜಾಮೀನು ಅರ್ಜಿಯ ವಿಚಾರಣೆಯ ಕುರಿತು ನ್ಯಾಯಾಲಯ ಮತ್ತು ಪ್ರಾಸಿಕ್ಯೂಷನ್ ಕಡೆಯಿಂದ ಮಾಹಿತಿದಾರರು ಮಾಹಿತಿ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರರಿಂದ ಅಗತ್ಯ ಕಾನೂನು ನೆರವು ಪಡೆಯುವುದು ಸಂತ್ರಸ್ತರ ಹಕ್ಕಾಗಿದೆ ಎಂದೂ ನ್ಯಾಯಾಲಯ ಹೇಳಿದೆ.

ಒಂದು ವೇಳೆ ಮಾಹಿತಿದಾರರು ಪ್ರಾಸಿಕ್ಯೂಷನ್ ಪತ್ತೆ ಹಚ್ಚಲು ವಿಫಲವಾದರೆ ಕಾರಣಗಳನ್ನು ಒಳಗೊಂಡ ಸ್ಥಿತಿಗತಿ ವರದಿ ಸಲ್ಲಿಸಬೇಕು. ಇದನ್ನು ಪರಿಗಣಿಸಿ ಸಂಬಂಧಿತ ನ್ಯಾಯಾಲಯವು ಅಗತ್ಯ ಆದೇಶ ಮಾಡಬಹುದಾಗಿದೆ. ನೋಟಿಸ್ ನೀಡಿದ ಹೊರತಾಗಿಯೂ ಮಾಹಿತಿದಾರರು ನ್ಯಾಯಾಲಯದ ಮುಂದೆ ಬಾರದಿದ್ದರೆ ಅರ್ಹತೆಯ ಆಧಾರದಲ್ಲಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿಬಹುದು. ಅಲ್ಲದೇ, ಪದೇ ಪದೆ ನೊಟೀಸ್ ನೀಡಿದರೂ ಸಂತ್ರಸ್ತರು ವಿಚಾರಣೆಗೆ ಹಾಜರಾಗಿಲ್ಲ ಎಂಬ ಅಂಶವನ್ನು ದಾಖಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಮಂಡ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಆರೋಪಿಯು ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಸಂತ್ರಸ್ತೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ. ಮಂಡ್ಯದ ವಿಶೇಷ ನ್ಯಾಯಾಲಯವು ತನಗೆ ಆರೋಪಿಯ ಜಾಮೀನು ಅರ್ಜಿಯ ಕುರಿತು ಮಾಹಿತಿ ನೀಡಿಲ್ಲ ಎಂದು ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಪ್ರತ್ಯೇಕ 3 ಪೋಕ್ಸೊ ಪ್ರಕರಣ: ಅಪರಾಧಿಗಳಿಗೆ ದಂಡಸಮೇತ ಜೈಲು ಶಿಕ್ಷೆ ವಿಧಿಸಿ ತ್ವರಿತಗತಿ ವಿಶೇಷ ನ್ಯಾಯಾಲಯ ತೀರ್ಪು

ABOUT THE AUTHOR

...view details