ಕರ್ನಾಟಕ

karnataka

ETV Bharat / state

Job Alert: ಹಾವೇರಿ ಜಿಲ್ಲೆಯಲ್ಲಿ ತಾಂತ್ರಿಕ ಸಹಾಯಕರು ಸೇರಿದಂತೆ 25 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಸಂಪೂರ್ಣ ಮಾಹಿತಿ

ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

haveri grama panchayat job notification for technical assistant and various job
haveri grama panchayat job notification for technical assistant and various job

By ETV Bharat Karnataka Team

Published : Oct 30, 2023, 1:52 PM IST

ಹಾವೇರಿ ಜಿಲ್ಲಾ ಪಂಚಾಯತ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಈ ಅರ್ಜಿ ನೇಮಕಾತಿ ನಡೆಸಲಾಗುವುದು. ಒಟ್ಟು 25 ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ನೇಮಕಾತಿ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ

ಹುದ್ದೆ ವಿವರ: ಜಿಲ್ಲಾ ಪಂಚಾಯತ್​ನ ಅಡಿ ಆಹ್ವಾನಿಸಲಾಗಿರುವ ಹುದ್ದೆ ಮಾಹಿತಿ ಇಲ್ಲಿದೆ..

  • ಜಿಲ್ಲಾ ಎಂಐಎಸ್​​ ಸಂಯೋಜಕರು 1
  • ತಾಲೂಕು ಎಂಐಎಸ್​ ಸಂಯೋಜಕರು 1
  • ತಾಂತ್ರಿಕ ಸಹಾಯಕರು ಸಿವಿಲ್​​ 4
  • ತಾಂತ್ರಿಕ ಸಹಾಯಕರು ಕೃಷಿ 6
  • ತಾಂತ್ರಿಕ ಸಹಾಯಕರು ತೋಟಗಾರಿಕೆ 1
  • ತಾಂತ್ರಿಕ ಸಹಾಯಕರು ಅರಣ್ಯ 4
  • ತಾಂತ್ರಿಕ ಸಹಾಯಕರು ರೇಷ್ಮೆ 1
  • ಆಡಳಿತ ಸಹಾಯಕ ಹುದ್ದೆಗಳು 7

ವಿದ್ಯಾರ್ಹತೆ:

  • ಜಿಲ್ಲಾ ಎಂಐಎಸ್​​ ಸಂಯೋಜಕರು ಎಂಸಿಎ ಮತ್ತು ಇಂಜಿನಿಯರಿಂಗ್​ ಪದವಿ
  • ತಾಲೂಕು ಎಂಐಎಸ್​ ಸಂಯೋಜಕರು ಎಂಸಿಎ ಮತ್ತು ಇಂಜಿನಿಯರಿಂಗ್​ ಪದವಿ
  • ತಾಂತ್ರಿಕ ಸಹಾಯಕರು ಸಿವಿಲ್​ ಸಿವಿಲ್​ನಲ್ಲಿ ಇಂಜಿನಿಯರಿಂಗ್​ ಪದವಿ
  • ತಾಂತ್ರಿಕ ಸಹಾಯಕರು ಕೃಷಿ ಅರಣ್ಯ ಶಾಸ್ತ್ರದಲ್ಲಿ ಇಂಜಿನಿಯರಿಂಗ್​ ಪದವಿ
  • ತಾಂತ್ರಿಕ ಸಹಾಯಕರು ತೋಟಗಾರಿಕೆ ತೋಟಗಾರಿಕೆಯಲ್ಲಿ ಎಂಎಸ್ಸಿ
  • ತಾಂತ್ರಿಕ ಸಹಾಯಕರು ಅರಣ್ಯ ಅರಣ್ಯಶಾಸ್ತ್ರದಲ್ಲಿ ಬಿಎಸ್ಸಿ
  • ತಾಂತ್ರಿಕ ಸಹಾಯಕರು ರೇಷ್ಮೆ ರೇಷ್ಮೆಕೃಷಿಯಲ್ಲಿ ಎಂಎಸ್ಸಿ
  • ಆಡಳಿತ ಸಹಾಯಕ ಹುದ್ದೆಗಳು ಬಿಕಾಂ (ಕನ್ನಡ ಮತ್ತು ಇಂಗ್ಲಿಷ್​ ಟೈಪಿಂಗ್​ ಪರಿಣಿತಿ ಹೊಂದಿರಬೇಕು)

ವಿಶೇಷ ಸೂಚನೆ:ತಾಂತ್ರಿಕ ಮತ್ತು ಆಡಳಿತ ಸಹಾಯಕ ಹುದ್ದೆ ಹೊರತುಪಡಿಸಿ, ಉಳಿದ ಹುದ್ದೆಗಳಿಗೆ ಕನಿಷ್ಠ 2 ರಿಂದ 3 ವರ್ಷ ಕಾರ್ಯ ನಿರ್ವಹಣೆ ಅನುಭವವನ್ನು ಹೊಂದಿರಬೇಕು.

ವಯೋಮಿತಿ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗೆ ಅನುಗುಣವಾಗಿ ವಯೋಮಿತಿ ಹೊಂದಿದ್ದು, ಕನಿಷ್ಠ 21ರಿಂದ 45 ವರ್ಷ ವಯೋಮಿತಿ ಹೊಂದಿರಬೇಕು.

ವೇತನ: ಆಯಾ ಹುದ್ದೆಗೆ ಅನುಸಾರವಾಗಿ ವೇತನ ನಿಗದಿಸಲಾಗಿದ್ದು, 22000 ದಿಂದ 34,000 ರೂ. ವೇತನ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್​​ ಪಟ್ಟಿ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಕ್ಟೋಬರ್​ 27 ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನವೆಂಬರ್​ 10 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ haveri.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: Court Jobs: ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ.. ಟೈಪಿಸ್ಟ್​, ಜವಾನ ಹುದ್ದೆಗಳ ಭರ್ತಿ

ABOUT THE AUTHOR

...view details