ಬೆಂಗಳೂರು :ಲಾಕ್ಡೌನ್ ಸಡಿಲಿಕೆ ನಂತರ ಸಿಲಿಕಾನ್ ಸಿಟಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಪೂರ್ಣ ಮಾಹಿತಿ ಈಟಿವಿ ಭಾರತ್ಗೆ ಲಭ್ಯವಾಗಿದೆ. ಒಂದೇ ತಿಂಗಳಲ್ಲಿ 3 ಸಾವಿರ ಅಪರಾಧ ಪ್ರಕರಣ ನಗರದಲ್ಲಿ ದಾಖಲಾಗಿವೆ. ಪೊಲೀಸರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸೈಬರ್ ಅಪರಾಧ ಪ್ರಕರಣ ಸಂಖ್ಯೆಯೇ ಹೆಚ್ಚಿದೆ. ಲಾಕ್ಡೌನ್ ಇದ್ದ ಏಪ್ರಿಲ್ನಲ್ಲಿ ಹಾಗೂ ಕೊಂಚ ಸಡಿಲಿಕೆಯಾದ ಮೇನಲ್ಲಿ ದಾಖಲಾಗಿರುವ ಪ್ರಕರಣಗಳನ್ನ ನೋಡುವುದಾದ್ರೆ..
ಪ್ರಕರಣಗಳು | ಏಪ್ರಿಲ್ | ಮೇ |
ಕೊಲೆ | 6 | 28 |
ದರೋಡೆ | 6 | 25 |
ಚೀಟಿಂಗ್ ಕೇಸ್ | 15 | 69 |
ರ‍್ಯಾಷ್ ಡ್ರೈವಿಂಗ್ | 57 | 179 |
ಹಲ್ಲೆ ಕೇಸ್ | 55 | 270 |
ವಾಹನ ಕಳ್ಳತನ | 70 | 232 |
ಕಿಡ್ನ್ಯಾಪ್ | 2 | 31 |
ಸೈಬರ್ ಕ್ರೈಂ | 400 | 855 |