ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಎಲ್ಲಡೆ ಬಿರುಸಿನ ಪ್ರಚಾರ ಶುರುವಾಗಿದೆ. ಇದರೊಟ್ಟಿಗೆ ಮತದಾರರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇವರಿಗೆ ಸಾಥ್ ನೀಡಲು ಕೆಎಸ್ ಆರ್ ಟಿಸಿ ನಿಗಮವೂ ಮುಂದಾಗಿದ್ದು, ಟಿಕೆಟ್ ಮತ್ತು ನಿಲ್ದಾಣಗಳಲ್ಲೂ ಡಿಸ್‌ಪ್ಲೇ ಬೋರ್ಡ್ ಗಳ ಮೂಲಕ ಮತದಾನಕ್ಕೆ ಸಂಬಂಧಿಸಿದ ಅರಿವು ಮೂಡಿಸಲಾಗುತ್ತಿದೆ.
ಕೆಎಸ್ಆರ್ಟಿಸಿ ಬಸ್ ಟಿಕೆಟ್ ಹಿಂದೆ ಮತದಾನ ಜಾಗೃತಿ - ಕೆಎಸ್ ಆರ್ ಟಿಸಿ
ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇವರಿಗೆ ಸಾಥ್ ನೀಡಲು ಕೆಎಸ್ ಆರ್ ಟಿಸಿ ನಿಗಮವೂ ಮುಂದಾಗಿದ್ದು, ಟಿಕೆಟ್ ಮತ್ತು ನಿಲ್ದಾಣಗಳಲ್ಲೂ ಡಿಸ್‌ಪ್ಲೇ ಬೋರ್ಡ್ ಗಳ ಮೂಲಕ ಮತದಾನಕ್ಕೆ ಸಂಬಂಧಿಸಿದ ಅರಿವು ಮೂಡಿಸಲಾಗುತ್ತಿದೆ.
ಪ್ರತಿದಿನ ಕೆ ಎಸ್ ಆರ್ ಟಿಸಿಯ 8800 ಬಸ್ಗಳು ಕಾರ್ಯ ನಿರ್ವಹಿಸುತ್ತಿವೆ. 29 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸಮೀಸುತ್ತಿರುವುದರಿಂದ ಟಿಕೆಟ್ ನಲ್ಲೇ 'ನೀವೂ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿದ್ದೀರಾ' ಎಂದು ಮುದ್ರಿತವಾಗಿ ಸಾರ್ವಜನಿಕರ ಕೈ ಸೇರುತ್ತಿವೆ. ಈ ವೋಟಿಂಗ್ ಸಂದೇಶವು ಪ್ರತಿದಿನ 22 ಲಕ್ಷ ಟಿಕೇಟಗಳಲ್ಲಿ ಮುದ್ರಿತವಾಗುತ್ತದೆ.
ಈ ಹಿಂದೆಯೂ ಕೆ ಎಸ್ ಆರ್ ಟಿ ಸಿ ಯಲ್ಲಿ ಪ್ರಯಾಣ ಮಾಡುವ ಎಲ್ಲಾ ಪ್ರಯಾಣಿಕರಿಗೂ ಮತ ಹಾಕುವಂತೆ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.. ಈಗ ಲೋಕಸಭಾ ಚುನಾವಣೆ ಹಿನ್ನೆಲೆ ಟಿಕೆಟ್ ನಲ್ಲಿ ಮತದಾನ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ಪರಿಶೀಲಿಸುವಂತೆ ಕೆ ಎಸ್ ಆರ್ ಟಿ ಸಿ ಟಿಕೆಟ್ ಮೂಲಕ ಜಾಗೃತಿ ಮೂಡಿಸುತ್ತಿದೆ.