ಬೆಂಗಳೂರು: 25 ಸಿನಿಮಾಗಳ ಕನ್ನಡದ ಜನಪ್ರಿಯ ನಟಿ ಹರಿಪ್ರಿಯಾ ಅವರು ಪ್ರಿಯವಾದ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಅದೇ ಬರವಣಿಗೆಯಾಗಿದೆ. ಅದನ್ನು ಈಗ ಬೇಬ್ ನೋಸ್ ನಾಟ್ ಎವ್ರಿಥಿಂಗ್(Babe Knows not everything) ಅಡಿಯಲ್ಲಿ ತರುತ್ತಿದ್ದಾರೆ.
ಹರಿಪ್ರಿಯಾ ಅವರಿಗೆ ಈ ಲಾಕ್ ಡೌನ್ ಸಂದರ್ಭದಲ್ಲಿ ಈ ಕೆಲಸಕ್ಕೆ ಹೆಚ್ಚು ಸಮಯ ಸಿಕ್ಕಿದ್ದು, ದಿವಸಕ್ಕೆ ಒಂದು ಅನಿಸಿಕೆಗಳನ್ನು ಪುಟ್ಟ ಲೇಖನದಲ್ಲಿ ಹರಿ ಬಿಡಲಿದ್ದಾರೆ. ಬೇಬ್ ನೋಸ್ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಒಂದು ವೆಬ್ಸೈಟ್ ಆಗಿ ಮೂಡಿಬಂದಿದೆ. ಅದರಲ್ಲಿ ಈಗಾಗಲೇ ಮೇಕಪ್ ಇಲ್ಲದೆಯು ಪ್ರಿಯವಾಗಿ ಕಾಣಿಸಬಹುದು, ಯಾಕೆ ವರಿ ಕಮಾನ್ ಹರಿಅಪ್ ಮತ್ತು ಗಮನಿಸದೆ ಇರುವುದನ್ನು ಗಮನಿಸುವುದು ಎಂಬ ಶೀರ್ಷಿಕೆಯಲ್ಲಿ ಹರಿಪ್ರಿಯಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಹಾಗೆ ಕೆಲವರಿಗೆ ಹಿತ ವಚನ ಸಹ ಹೇಳಿದ್ದಾರೆ.