ಕರ್ನಾಟಕ

karnataka

ETV Bharat / state

ಬೆಂಗಳೂರು: ಸೈಬರ್​​​ ಖದೀಮರ ಮಟ್ಟ ಹಾಕಲು‌ ಮಹಿಳಾ ಅಧಿಕಾರಿಗಳ ತಂಡ ನೇಮಕ - ಸೈಬರ್​ ಕ್ರೈಂ

ಮಕ್ಕಳು‌ ಮತ್ತು ವಿದ್ಯಾರ್ಥಿಗಳು ಹಾಗೆಯೇ ಯುವತಿಯರ ಫೋಟೋಗಳನ್ನು ಕೆಲ ಸೈಬರ್ ಅಪರಾಧಿಗಳು ಎಡಿಟ್ ಮಾಡಿ ಪೊರ್ನ್ ವೆಬ್​ಸೈಟ್​ಗಳಿಗೆ ಅಪ್ಲೋಡ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇವುಗಳನ್ನ ಮಟ್ಟ ಹಾಕಲು ಮಹಿಳಾ ನೋಡಲ್ ಅಧಿಕಾರಿಗಳ ತಂಡ ರೆಡಿಯಾಗಿದೆ.

ds
ಸೈಬರ್ ಖದೀಮರ ಮಟ್ಟ ಹಾಕಲು‌ ಮಹಿಳಾ ತಂಡ ನೇಮಕ

By

Published : Aug 1, 2020, 11:26 AM IST

ಬೆಂಗಳೂರು: ಒಂದೆಡೆ ಕೊರೊನಾ ಸೋಂಕಿನ ಹಾವಳಿಯಾದರೆ, ಮತ್ತೊಂದೆಡೆ ಸೈಬರ್ ಖದೀಮರ ಹಾವಳಿ ದಿನೇ ದಿನೆ‌ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಈ ಕೃತ್ಯಗಳನ್ನು ತಡೆಗಟ್ಟಲು ಜೆ.ಸಿ.ನಗರದ ಎಸಿಪಿ ರೀನಾ ಸುವರ್ಣರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಸೈಬರ್ ಖದೀಮರ ಮಟ್ಟ ಹಾಕಲು ಮಹಿಳಾ ಅಧಿಕಾರಿಗಳ ತಂಡ ನೇಮಕ

ಈ ಬಗ್ಗೆ ಈಟಿವಿ ಭಾರತ ಜೊತೆ ರೀನಾ ಸುವರ್ಣ, ಲಾಕ್​ಡೌನ್ ಸಂದರ್ಭದಲ್ಲಿ ಬಹುತೇಕ ಸೈಬರ್ ಅಪರಾಧಗಳು ರಾಜ್ಯದಲ್ಲಿ ನಡೆದಿವೆ. ಸದ್ಯ ಮಕ್ಕಳು ಹಾಗೂ ಯುವತಿಯರಿಗೆ ಸೈಬರ್ ಖದೀಮರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅಶ್ಲೀಲ ಫೋಟೋ ‌ಎಡಿಟ್ ಮಾಡಿ ‌ಪೋರ್ನ್ ವೆಬ್​ಸೈಟ್​ಗಳಿಗೆ ಅಪ್ಲೋಡ್ ಮಾಡಿ ಹಣ ಗಳಿಸುತ್ತಿದ್ದಾರೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮುನ್ನ ಯೋಚಿಸಿ ಅಪ್ಲೋಡ್ ಮಾಡುವುದು ಅನಿವಾರ್ಯವಾಗಿದೆ. ಸದ್ಯ ಇಂಟರ್​ನೆಟ್​ ಬಳಕೆ ಹೆಚ್ಚಾಗಿದೆ. ಹೀಗಾಗಿ ಸೈಬರ್ ಖದೀಮರು ಇದನ್ನು ಸದ್ಬಳಕೆ ಮಾಡಿಕೊಂಡು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆಂದು ಹೇಳಿದರು.

ABOUT THE AUTHOR

...view details