ಬೆಂಗಳೂರು:ಆರ್ ಟಿ ಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಇಂದು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಧ್ಯವರ್ತಿಗಳ ಹಾವಳಿ ಹಿನ್ನೆಲೆ : ಆರ್ಟಿಓ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ... - ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ
ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು ಆರ್ ಟಿ ಓ ಕಚೇರಿ ಮೇಲೆ ದಾಳಿ ಮಾಡಿ ಕಚೇರಿ ಬಳಿ ಇರುವ ಮಧ್ಯವರ್ತಿಗಳ ವಿಚಾರಣೆ ನಡೆಸಿದ್ದಾರೆ.
ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು ಆರ್ಟಿಓ ಕಚೇರಿ ಬಳಿ ದಾಳಿ ಮಾಡಿ ಮಧ್ಯವರ್ತಿಗಳ ವಿಚಾರಣೆ ನಡೆಸಿದ್ದಾರೆ. ಕೆ.ಆರ್.ಪುರಂ, ಶಾಂತಿನಗರ, ಆರ್.ಆರ್.ನಗರ ಹಾಗೂ ಜಯನಗರ ಆರ್ಟಿಒ ಕಚೇರಿ ಬಳಿ ವಾಹನ ಸವಾರರು ನೋಂದಣಿ, ಡಿಎಲ್ ಮಾಡಲು ಅಥವಾ ಕೇಸ್ ಸಂಬಂಧಪಟ್ಟ ವಿಚಾರಗಳನ್ನ ಮಾತನಾಡಲು ಬರುವ ವೇಳೆ ಹಲವು ಮಧ್ಯವರ್ತಿಗಳು ಆರ್ಟಿಒ ಅಧಿಕಾರಿಗಳ ರೀತಿ ಸುಲಭವಾಗಿ ಕೆಲಸ ಮಾಡಿಕೊಡುವುದಾಗಿ ಹೇಳಿ ಹಲವಾರು ವಾಹನ ಸವಾರರಿಂದ ಹಣ ಲೂಟಿ ಮಾಡ್ತಿದ್ದರು.
ಈ ಮಾಹಿತಿ ಲೋಕಾಯುಕ್ತರ ಗಮನಕ್ಕೆ ಬಂದಿರುವ ಕಾರಣ ಲೋಕಾಯುಕ್ತರ ಆದೇಶದಂತೆ ದಾಳಿ ನಡೆಸಿ ಕೆಲವು ಮಧ್ಯವರ್ತಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು ಸದ್ಯ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.