ಬೆಂಗಳೂರು:ಇಲ್ಲೊಬ್ಬ ಒಬ್ಬ ತಾಯಿ ಇಳಿ ವಯಸ್ಸಿನಲ್ಲಿ ಮಗನನ್ನು ಕಳೆದು ಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ. ಸೊಸೆಯ ಗಂಡನ ಆಸ್ತಿಗಾಗಿ ಅತ್ತೆಯನ್ನು ಪೀಡಿಸುತ್ತಿದ್ದಾಳೆ.
ನಗರದ ಕೆಂಗೇರಿ ಬಳಿಯ ಸೂಲಿಕೆರೆಯ ರೇಣುಕಮ್ಮ ಎಂಬುವವರ ಮಗ ಮಂಜುನಾಥ್ ಜೂನ್ 1 ರಂದು ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಡೆತ್ ನೋಟ್ ಬರೆದು ಪ್ರಾಣ ಬಿಟ್ಟಿದ್ದಾನೆ. ಡೆತ್ ನೋಟ್ನಲ್ಲಿ ಪ್ರಕಾರ ಮಂಜುನಾಥ್ನ ಹೆಂಡತಿ ಅನುಸೂಯಾಳನ್ನು ಬಂಧಿಸಿದ್ದರು. ಆದರೆ, ಬೇಲ್ ಮೇಲೆ ಹೊರಗೆ ಬಂದು ಮತ್ತೆ ಆಸ್ತಿಗಾಗಿ ಕಾಟ ಕೊಡುತ್ತಿದ್ದಾಳೆ ಎಂದು ರೇಣುಕಮ್ಮ ಆರೋಪಿಸುತ್ತಿದ್ದಾರೆ.
ಮದುವೆಯಾದ ಮರುದಿನದಿಂದ ಕಿರುಕುಳ:ಕೆಂಗೇರಿ ಬಳಿಯ ರಾಮಸಂದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್, ತನ್ನ ಆಸ್ತಿ, ಹಣ ಯಾವುದನ್ನೂ ಹೆಂಡತಿಗೆ ಕೊಡಬಾರದು, ತಾಯಿಗೆ ಸೇರಬೇಕು. ಖಾಸಗಿ ವಿಡಿಯೋ ಮುಂದಿಟ್ಟುಕೊಂಡು ಪುಡಿ ರೌಡಿಗಳ ಜೊತೆ ಸೇರಿ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ. ಸೈಟು, ಆಸ್ತಿ ತನ್ನ ಹೆಸರಿಗೆ ಬರೆದುಕೊಡುವಂತೆ ಮದುವೆಯ ಮರು ದಿನದಿಂದ ಕಿರುಕುಳ ಕೊಡುತ್ತಿದ್ದಾಳೆ ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ.