ಬೆಂಗಳೂರು:ಪ್ರೀತಿಸಿ ಮದ್ವೆ ಮಾಡಿಕೊಂಡಿದ್ದ ಗಂಡನೇ ಪತ್ನಿಗೆ ವಿಲನ್ ಆಗಿ ಕಾಡುತ್ತಿದ್ದಾನೆ ಎಂಬ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಅನಿಶ್ ಎಂಬಾತ ಏಂಜಲಾಳನ್ನು ಪ್ರೀತಿಸಿ ಮದ್ವೆ ಮಾಡಿಕೊಂಡಿದ್ದ. ಆದ್ರೆ ಬರ್ತಾ ಬರ್ತಾ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದಾರೆ.
ಇದೀಗ ಗಂಡನೇ ಹೆಂಡತಿಗೆ ವಿಲನ್ ಆಗಿ ಕೆಲವು ದಿನಗಳಿಂದ ಹೆಂಡತಿಯ ಖಾಸಗಿ ಕ್ಷಣ ಫೋಟೊ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಫೋಟೊಗಳನ್ನ ಸ್ಕ್ರೀನ್ ಶಾಟ್ ತೆಗೆದು ಅಶ್ಲೀಲವಾಗಿ ಬಳಸಿ ಧಮ್ಕಿ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿಯವರೆಗೆ 10 ಸಾವಿರಕ್ಕೂ ಅಧಿಕ ಫೋಟೊಸ್ ಇಟ್ಟುಕೊಂಡಿದ್ದ ಎನ್ನಲಾಗ್ತಿದೆ. ಅಲ್ಲದೆ, ಅನಿಶನು ಏಂಜಲಾಳ ಫೋಟೊಗಳನ್ನ ವೈರಲ್ ಮಾಡುವುದಾಗಿ ಏಂಜಲಾ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.
ಸದ್ಯ ಸಂತ್ರಸ್ತೆ ಸೈಬರ್ ಠಾಣೆಗೆ ದೂರು ನೀಡಿದ್ದು, ತನಗೆ ನ್ಯಾಯಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾಳೆ. ಹಾಗೆ ಆತ ಮತ್ತೊಂದು ಹುಡುಗಿಯ ಜೊತೆ ಸಂಬಂಧ ಹೊಂದಿರುವ ವಿಚಾರ ಕೂಡ ಬಯಲಾಗಿದೆ ಎನ್ನಲಾಗ್ತಿದೆ. ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.