ಕರ್ನಾಟಕ

karnataka

ETV Bharat / state

ದಲಿತರು ಸಿಎಂ ಆಗುವುದಾದರೆ ಅದು ಕಾಂಗ್ರೆಸ್​​ನಲ್ಲಿ ಮಾತ್ರ ಸಾಧ್ಯ: ಎಲ್‌ ಹನುಮಂತಯ್ಯ

ಕಾಂಗ್ರೆಸ್​ನ ಮೂಲ ಧ್ಯೇಯ ದಲಿತರಿಗೆ ಸಿಎಂ ಸ್ಥಾನ ಕೊಡಬೇಕು ಎನ್ನುವುದಾಗಿದೆ. ಯಾವುದೇ ರಾಜಕೀಯ ಪಕ್ಷಗಳಿಂದಲೂ ದಲಿತರನ್ನು ಸಿಎಂ ಮಾಡಲು ಸಾಧ್ಯವಾದರೆ ಅದು ಕಾಂಗ್ರೆಸ್​ ಪಕ್ಷದಲ್ಲಿ ಮಾತ್ರ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ. ಇಲ್ಲಿ ಗೆಲುವು ಲಭಿಸಿದ ಬಳಿಕ ಯಾರು ಸಿಎಂ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ..

dalith cm in congress
ಹನುಮಂತಯ್ಯ

By

Published : Jun 28, 2021, 5:17 PM IST

ಬೆಂಗಳೂರು: ಯಾವುದೇ ರಾಜಕೀಯ ಪಕ್ಷಗಳಿಂದಲೂ ದಲಿತರನ್ನು ಸಿಎಂ ಮಾಡಲು ಸಾಧ್ಯವಿಲ್ಲ. ಅದೇನಾದರೂ ಸಾಧ್ಯವಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ರಾಜ್ಯಸಭೆ ಸದಸ್ಯ ಡಾ. ಎಲ್ ಹನುಮಂತಯ್ಯ ಹೇಳಿದ್ರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಯೂ ಕಾಲ ಕೂಡಿ ಬಂದಾಗ ಅದು ಆಗಲಿದೆ. ಅಲ್ಲದೇ ದಲಿತ ಸಿಎಂ ಚರ್ಚೆಗೆ ಇದು ಸೂಕ್ತ ಕಾಲ ಅಲ್ಲ, ಚುನಾವಣೆಯಲ್ಲಿ ಪಕ್ಷ ಗೆದ್ದ ಬಳಿಕ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

'ನನ್ನ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಒಂದು ಸಮಿತಿ ರಚಿಸಿದೆ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಏನೆಲ್ಲಾ ಕಾರ್ಯಗಳು ಆಗಿವೆ ಎಂಬ ವರದಿ ಸಿದ್ಧಪಡಿಸಲು ತಿಳಿಸಿತ್ತು. ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸಿರುವ ವರದಿಯನ್ನು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಸಲ್ಲಿಕೆ ಮಾಡುತ್ತೇನೆ. ಅಗತ್ಯವಿರುವ ಎಲ್ಲಾ ಮಾಹಿತಿಗಳು ಸಂಗ್ರಹ ಆಗಿದೆ. ಜಿಲ್ಲಾವಾರು ವಿವರ ಕೂಡ ಲಭ್ಯವಿದೆ. ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ವಿವರ ವರದಿಯಲ್ಲಿದೆ' ಎಂದು ವಿವರಿಸಿದರು.

ರಾಜ್ಯಸಭೆ ಸದಸ್ಯ ಹನುಮಂತಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದು..

ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ. ಇಲ್ಲಿ ಗೆಲುವು ಲಭಿಸಿದ ಬಳಿಕ ಯಾರು ಸಿಎಂ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಚುನಾವಣೆ ಬಳಿಕವೇ ಈ ನಿರ್ಧಾರವಾಗಲಿದೆ. ಪ್ರಸ್ತುತ ದಲಿತ ಸಿಎಂ ವಿಚಾರ ಪ್ರಸ್ತಾಪವಾಗಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಸಾಕಷ್ಟು ಮಂದಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಈ ಚರ್ಚೆ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೂ ಇತ್ತು. ಕಾಂಗ್ರೆಸ್​ನ ಮೂಲ ಧ್ಯೇಯ ದಲಿತರಿಗೆ ಸಿಎಂ ಸ್ಥಾನ ಕೊಡಬೇಕು ಎನ್ನುವುದಾಗಿದೆ. ಆದರೆ, ಇದು ಯಾವುದೇ ನಿರ್ಧಾರ ಕೈಗೊಳ್ಳುವುದು ಆದರೂ ಚುನಾವಣೆ ನಡೆದ ಬಳಿಕವೇ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಎನ್​ಡಿಎ ಸರ್ಕಾರದ ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್ ಬೆಲೆ ಏರಿಕೆ ಯುಪಿಎ ಬಳುವಳಿ ಎಂಬ ಹೇಳಿಕೆ ನೀಡಿದ್ದರು. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ಪೆಟ್ರೋಲ್ ದರ ನಿರ್ಧಾರ ಕ್ರೂಡ್ ಆಯಿಲ್ ದರವನ್ನು ಆಧರಿಸಿದೆ. 2008ರಲ್ಲಿ 139.10 ಡಾಲರ್ ಇತ್ತು ಅವಾಗ ಪೆಟ್ರೋಲ್ ದರ 50.60 ಪೈಸೆ ಇತ್ತು. 2013 ರಲ್ಲಿ ಕ್ರೂಡ್ ಆಯಿಲ್ ಬೆಲೆ 110.80 ಡಾಲರ್ ಇದ್ದಾಗ 66.9 ಪೈಸೆ ಇತ್ತು. 2014ರಲ್ಲಿ NDA ಅವಧಿಯಲ್ಲಿ 57.33 ಡಾಲರ್ ಇದ್ದಾಗ ಪೆಟ್ರೋಲ್ ದರ 72.23 ಪೈಸೆ ಆಗಿದೆ, ಇದು 2018ರಲ್ಲಿ 53.80 ಇದ್ದಾಗ 75.55 ಪೆಟ್ರೋಲ್ ಬೆಲೆ ಇತ್ತು. 2020 51.8 ಡಾಲರ್ ಬಂದಾಗ ಪೆಟ್ರೋಲ್ ದರ 86.56 ಕ್ಕೆ ಮಾರಾಟ ಆಗುತ್ತಿತ್ತು.

ಇದೀಗ ಕ್ರೂಡ್ ಆಯಿಲ್ ದರ 72.22 ಡಾಲರ್ ಇದ್ದಾಗ 98.71 ರೂಪಾಯಿ ಪೆಟ್ರೋಲ್ ದರ ತಲುಪಿದೆ. ಅಷ್ಟೇ ಅಲ್ಲ, ಪೆಟ್ರೋಲ್ ಮೇಲಿನ ತೆರಿಗೆ ಪ್ರಮಾಣ 31.90 ಶೇ. ಏರಿಕೆ ಆಗಿದೆ‌. 3.56 ರಿಂದ 35.80 ಶೇ.ಕ್ಕೆ ಡೀಸೆಲ್ ಟ್ಯಾಕ್ಸ್ ಹೆಚ್ಚಳ ಆಗಿದೆ. ಹತ್ತು ಪಟ್ಟು ತೆರಿಗೆ ಏರಿಕೆ ಆಗಿದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂಬ ಸವಿಸ್ತಾರವಾದ ವಿವರ ಸಲ್ಲಿಸಿದರು.

20 ಲಕ್ಷ ಕೋಟಿ ರೂ. ಸಂಗ್ರಹ :ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್​ನಿಂದ 20 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಮಾಡಿದೆ. ಆದರೂ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಕಾಂಗ್ರೆಸ್ 70 ವರ್ಷದಲ್ಲಿ 50 ಲಕ್ಷ ಕೋಟಿ ಸಾಲ ಮಾಡಿತ್ತು.‌ ಆದರೆ, ಬಿಜೆಪಿ ಸರ್ಕಾರ 7 ವರ್ಷದಲ್ಲಿ 50 ಲಕ್ಷ ಕೋಟಿ ಸಾಲ ಮಾಡಿದೆ. ಏಳು ವರ್ಷದಲ್ಲಿ ಗ್ಯಾಸ್ ಸಿಲಿಂಡರ್ ಉಚಿತ ಎಂದು ಹೇಳುತ್ತಿದ್ದಾರೆ. ಆದರೆ, ಒಂದು ಸಿಲಿಂಡರ್ ಮಾತ್ರ ಉಚಿತ. 400ರೂ.ಇದ್ದ ಸಿಲಿಂಡರ್ ಬೆಲೆ 1000 ರೂ.ಗೆ ತಲುಪಿದೆ ಎಂದು ಹನುಮಂತಯ್ಯ ಅಸಮಾಧಾನ ಹೊರಹಾಕಿದ್ರು. ಕೇಂದ್ರ ಸರ್ಕಾರ ಜನರನ್ನು ದೋಚುವ ಸರ್ಕಾರ ಎಂದು ಕಿಡಿಕಾರಿದರು.

ABOUT THE AUTHOR

...view details