ಬೆಂಗಳೂರು: ಏರೋ ಇಂಡಿಯಾ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸುಧಾರಿತ ಲಘು ಹೆಲಿಕಾಪ್ಟರ್ ಮಾರ್ಕ್ -3 ಅನ್ನು ಮಾರಿಷಸ್ ಪೊಲೀಸ್ ಪಡೆಗೆ ಹಸ್ತಾಂತರಿಸಲಾಗಿದೆ. ಹೆಚ್.ಎ.ಎಲ್ ನಿರ್ದೇಶಕ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಜಯದೇವ, ಸೇರಿದಂತೆ ಮಾರಿಷಸ್ ಪ್ರಮುಖರ ಸಮ್ಮುಖದಲ್ಲಿ ಹೆಲಿಕಾಪ್ಟರ್ ಹಸ್ತಾಂತರ ಮಾಡಲಾಗಿದೆ. ಹೆಲಿಕಾಪ್ಟರ್ ಹಸ್ತಾಂತರದಿಂದ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಬಲಿಷ್ಠವಾಗಿದೆ. ಮಾರಿಷಸ್ ಪೊಲೀಸ್ ಪಡೆಗೆ ಹೆಲಿಕಾಪ್ಟರ್ ಸೇರಲಿವೆ. ಇದರಿಂದ ದೇಶದ ಭದ್ರತೆಗೆ ಮತ್ತಷ್ಟು ಸಹಕಾರಿಯಾಗಲಿದೆ. ಭಾರತ ಮತ್ತು ಮಾರಿಷಸ್ ಮೂರು ದಶಕಗಳಿಂದ ಬಲವಾದ ವ್ಯಾಪಾರ ಸಂಬಂಧ ಹಂಚಿಕೊಂಡಿವೆ. ಎಚ್‌ಎಎಲ್ ತಯಾರಿಸಿದ ಹೆಲಿಕಾಪ್ಟರ್ ಈಗಾಗಲೇ ಮಾರಿಷಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆ:ಐದು ದಿನಗಳ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಸ್ವದೇಶಿ ಉಪಕರಣಗಳು, ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆ ರೂಪಿಸಲು ಹೆಚ್.ಎ.ಎಲ್ ಮುಂದಾಗಿದೆ.
ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ ಮಾಡೆಲ್ ಪ್ರದರ್ಶನ:ಏರೋ ಐಡಿಯಾ 2023ರಲ್ಲಿ ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಮೊಟ್ಟಮೊದಲ ಬಾರಿಗೆ, ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ ಮಾಡೆಲ್ ಅನ್ನು ಪ್ರದರ್ಶಿಸುತ್ತಿದೆ. ಯುದ್ಧ ವಿಮಾನ ತರಬೇತಿಯಲ್ಲಿ ನಿರ್ಣಾಯಕ ಉಪಯುಕ್ತತೆಯೊಂದಿಗೆ ನೆಕ್ಸ್-ಚೆನ್ ಸೂಪರ್‌ಸಾನಿಕ್ ಟ್ರೈನರ್' ಎಂದು ಇದಕ್ಕೆ ಕರೆಯಲಾಗುತ್ತದೆ. ತರಬೇತುದಾರರು ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ ಅದೇ, ಎಲೆಕ್ಟ್ರಾನಿಕ್ ವಾರ್ ಫೇರ್ ಮಾಡೆಲ್ ಸೂಟ್, ಇನ್‌ಫಾರಡ್ ಸರ್ಚ್ ಮತ್ತು ಬ್ಯಾಕ್ ಸೇರಿದಂತೆ ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಈ ವಿಮಾನದಲ್ಲಿ ಬರಲಿದೆ. ಕಂಪ್ಯೂಟರ್-ನಿಯಂತ್ರಿತ ವ್ಯವಸ್ಥೆ ಶಾಫ್ಟ್ ವಿಮಾನದಲ್ಲಿದೆ.