ಕರ್ನಾಟಕ

karnataka

ETV Bharat / state

ತಿಂಥಣಿ ಬ್ರಿಜ್​​​​​​‌ನಲ್ಲಿ 3 ದಿನಗಳ ಹಾಲುಮತ ಸಂಸ್ಕೃತಿ ವೈಭವ: ಚಾಲನೆ ನೀಡಲಿದ್ದಾರೆ ಮಾಜಿ‌ ಸಿಎಂ - halumumatha samskruthi vaibhava programme

ಕನಕ ಗುರು ಪೀಠದ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ರಾಯಚೂರಿನ ತಿಂಥಣಿ ಬ್ರಿಜ್​ನಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ನಡೆಯಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

halumumatha samskruthi vaibhava-2021 to be held in raichur
ಹಾಲುಮತ ಸಂಸ್ಕೃತಿ ವೈಭವ

By

Published : Jan 9, 2021, 5:12 PM IST

ಬೆಂಗಳೂರು: ನಗರದ ಕುರುಬರ ಸಂಘದಿಂದ ಸುದ್ದಿಗೋಷ್ಟಿ ನಡೆಸಲಾಗಿದ್ದು,ಈ ವೇಳೆ ರಾಯಚೂರಿನ ತಿಂಥಣಿ ಬ್ರಿಜ್​ನಲ್ಲಿ ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ-2021 ನಡೆಸುವುದರ ಬಗ್ಗೆ ಮಾಹಿತಿ ನೀಡಲಾಯಿತು.

ಬೆಂಗಳೂರು

ಕನಕ ಗುರು ಪೀಠದ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಉತ್ಸವ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮಾಜಿ ಸಚಿವ ಹೆಚ್ಎಂ ರೇವಣ್ಣ, ಕುರುಬ ಸಮುದಾಯವನ್ನು ಸಾಮಾಜಿಕವಾಗಿ ಮುಂದೆ ತರಲು ಪ್ರತಿವರ್ಷ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗ್ತಿದೆ. ಈ ವರ್ಷ ಈ ಕಾರ್ಯಕ್ರಮ ಇನ್ನಷ್ಟು ವಿಶಿಷ್ಟತೆಗಳಿಂದ ಕೂಡಿರಲಿದ್ದು, ಉಚಿತ ರಕ್ತ ಪರೀಕ್ಷೆ, ಕಣ್ಣು ತಪಾಸಣೆ, ಚಿಕಿತ್ಸಾ ಶಿಬಿರ, ಎತ್ತುಗಳ ಭಾರ ಎಳೆಯುವ ಸ್ಪರ್ಧೆ, ಟಗರು ಕಾಳಗ, ಚಲನಚಿತ್ರ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಇರಲಿವೆ.

ಇನ್ನೂ ಬುಡಕಟ್ಟು ಸಂಸ್ಕೃತಿಯನ್ನು ಜನತೆಗೆ ಪರಿಚಯ ಮಾಡುವ ಅನೇಕ ಕಾರ್ಯಕ್ರಮಗಳು ಸಹ ಇರಲಿವೆ ಎಂದು ಮಾಜಿ ಸಚಿವ ಹೆಚ್​ಎಂ ರೇವಣ್ಣ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ರು.

ಇದನ್ನೂ ಓದಿ:ಕೋವಿಡ್​ ವ್ಯಾಕ್ಸಿನ್​ ಹಾಕಿಸಿಕೊಂಡ ಮೊದಲ ಭಾರತೀಯ ನಟಿ ಶಿಲ್ಪಾ.. ಹೇಳಿದ್ದೇನು!?

ABOUT THE AUTHOR

...view details