ಕರ್ನಾಟಕ

karnataka

ETV Bharat / state

'ಹಾಲ್ ಆಫ್ ಫೇಮ್' ಎಂಬ ಅದ್ಬುತ ಕ್ರೀಡಾ ನೆನಪುಗಳ ಲೋಕಾರ್ಪಣೆ.. ಇದು ಕ್ರೀಡಾಪಟುಗಳ ಗ್ಯಾಲರಿ

ಮಹಾರಾಜ ಜಯಚಾಮರಾಜೇಂದ್ರ ಒಡೆಯರ್​ ಅವರಿಂದ ಶ್ರೀಕಂಠದತ್ತ ಒಡೆಯರ್​​ ಅವರ ಕಾಲದವರೆಗಿನ ಕ್ರೀಡಾ ಚಟುವಟಿಕೆಗಳ ಚಿತ್ರಗಳು ಇವೆ. ಹಾಲ್ ಆಫ್ ಫೇಮ್ ಸಿಲಿಕಾನ್​ ಸಿಟಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ..

special hall of fame inagurated at kantirava stadium
ಹಾಲ್ ಆಫ್ ಫೆಮ್ ಲೋಕಾರ್ಪಣೆ

By

Published : Dec 13, 2020, 6:57 AM IST

Updated : Dec 13, 2020, 1:04 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿವಾಲಾರಿಂದ ಉದ್ಘಾಟನೆಗೊಂಡ ಕಂಠೀರವ ಕ್ರೀಡಾಂಗಣದಲ್ಲಿನ ರಾಜ್ಯ ಒಲಿಂಪಿಕ್ ಸಂಸ್ಥೆಯ ಕಟ್ಟಡದಲ್ಲಿ ನಿರ್ಮಾಣವಾಗಿರುವ 'ಹಾಲ್ ಆಫ್ ಫೇಮ್' ಎಂಬುದು ಅದ್ಭುತ ಕಲ್ಪನೆಯಾಗಿದೆ.

ಹಾಲ್ ಆಫ್ ಫೆಮ್ ಲೋಕಾರ್ಪಣೆ
ಕ್ರೀಡಾಲೋಕದ ದಿಗ್ಗಜರನ್ನು ಅದರಲ್ಲೂ ರಾಜ್ಯದ ಕ್ರೀಡಾಪಟುಗಳನ್ನು ಬಿಂಬಿಸುವ ವಿಶಿಷ್ಟ ಚಿತ್ರ ನೆನಪುಗಳ ಲೋಕ, ಕ್ರೀಡಾ ಪ್ರೇಮಿಗಳನ್ನ ಸೆಳೆಯದೇ ಇರದು. ಸಾರ್ವಜನಿಕರ ಉಚಿತ ಪ್ರವೇಶ ಕಲ್ಪಿಸಿಕೊಡುವ ಕ್ರೀಡಾ ಛಾಯಾಚಿತ್ರಗಳ ಪ್ರಪಂಚ ಕಣ್ಮನ ಸೆಳೆಯುತ್ತದೆ.ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಗೋವಿಂದರಾಜ್ ಅವರ ಸತತ ಪರಿಶ್ರಮ ಹಾಗೂ ಪರಿಕಲ್ಪನೆಯಿಂದ ಈ ಹಾಲ್​ ಆಫ್​ ಫೇಮ್​ ಸೃಷ್ಟಿಯಾಗಿದೆ. 2018ರಲ್ಲಿ ರಾಜ್ಯ ಸರ್ಕಾರ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಒಲಿಂಪಿಕ್ ಸಂಸ್ಥೆಗೆ ನೀಡಿದ್ದ ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿತ್ತು.

ಅದರಲ್ಲೇ ಈ ಚಿತ್ರ ಲೋಕ ಸೃಷ್ಟಿಯಾಗಿದೆ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಗೋವಿಂದ್ ರಾಜ್ ಮಾಹಿತಿ ನೀಡಿದ್ದು, ಅವರು ವಿದೇಶಗಳಲ್ಲಿ ಈ ರೀತಿಯ ಕ್ರೀಡಾ ವಿಶೇಷ ಜಾಗಗಳನ್ನು ನೋಡಿ ನಮ್ಮ ದೇಶದಲ್ಲಿ ಯಾಕೆ, ಅದರಲ್ಲೂ ಬೆಂಗಳೂರಿನಲ್ಲಿ ಯಾಕೆ ಇದನ್ನು ಮಾಡಬಾರದು ಎಂಬ ಯೋಚನೆ ಈ ಹಾಲ್ ಆಫ್ ಫೇಮ್ ಸೃಷ್ಟಿಗೆ ಕಾರಣ ಎಂದು ಹೇಳಿದ್ರು.

ಇಲ್ಲಿ ಸುಮಾರು 57 ಜನ ಪದ್ಮಶ್ರೀ, ದ್ರೋಣಾಚಾರ್ಯ, ಅರ್ಜುನ ಪ್ರಶಸ್ತಿ, ಒಲಿಂಪಿಕ್​​ನಲ್ಲಿ ಭಾಗವಹಿಸಿದವರ ವಿಶೇಷ ಚಿತ್ರಗಳಿವೆ. ಕ್ರೀಡಾ ರಂಗಕ್ಕೆ ವಿಶೇಷ ಕೊಡುಗೆ ನೀಡಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಚಿತ್ರಗಳಿದ್ದು, ನೋಡುಗರನ್ನು ನೆನಪಿನಂಗಳಕ್ಕೆ ಕರೆದೊಯ್ಯುತ್ತವೆ. 1952ರಿಂದ ಅಧಿಕಾರ ನಡೆಸಿದ ಮುಖ್ಯಮಂತ್ರಿಗಳ, ಸಚಿವರ, ಶಾಸಕರ, ಕ್ರೀಡಾ ಚಟುವಟಿಕೆಗಳ ಛಾಯಾಚಿತ್ರಗಳು ಇವೆ.

ಹಾಲ್ ಆಫ್ ಫೆಮ್ ಲೋಕಾರ್ಪಣೆ

ಮಹಾರಾಜ ಜಯಚಾಮರಾಜೇಂದ್ರ ಒಡೆಯರ್​ ಅವರಿಂದ ಶ್ರೀಕಂಠದತ್ತ ಒಡೆಯರ್​​ ಅವರ ಕಾಲದವರೆಗಿನ ಕ್ರೀಡಾ ಚಟುವಟಿಕೆಗಳ ಚಿತ್ರಗಳು ಇವೆ. ಹಾಲ್ ಆಫ್ ಫೇಮ್ ಸಿಲಿಕಾನ್​ ಸಿಟಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ:ಸರ್ಜರಿ ವೇಳೆ ಪಿಯಾನೋ ನುಡಿಸಿ, ಹಾಡು ಹೇಳಿ ಬ್ರೈನ್ ಟ್ಯೂಮರ್​​ ಗೆದ್ದ ಬಾಲಕಿ!

Last Updated : Dec 13, 2020, 1:04 PM IST

ABOUT THE AUTHOR

...view details