ಬೆಂಗಳೂರು:ಪ್ರಯಾಣಿಕರ ಬೇಡಿಕೆಯ ಮೇರೆಗೆ ಕೆಎಸ್‌ಆರ್‌ಟಿಸಿ, ಶ್ವಾನದ ಪ್ರಯಾಣ ಟಿಕೆಟ್ ದರವನ್ನು ಕಡಿತಗೊಳಿಸಿದೆ. ಈ ಹಿಂದೆ ಸಾಕು ಪ್ರಾಣಿಯು ಮರಿಯಾಗಿದ್ದರೂ ಕೂಡ ಫುಲ್ ಟಿಕೆಟ್ ವಿಧಿಸಲಾಗುತ್ತಿತ್ತು. ಇದೀಗ ನಿಗಮ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ಅದರಂತೆ ಬಸ್ನಲ್ಲಿ ಕೊಂಡೊಯ್ಯುವ ಎಲ್ಲ ಸಾಕು ಪ್ರಾಣಿಗೂ ತಲಾ ಅರ್ಧ ಟಿಕೆಟ್ ದರ ವಿಧಿಸಲಾಗುವುದು ಎಂದು ತಿಳಿಸಿದೆ.
ನಾನ್ ಎಸಿ ಬಸ್ಗಳಲ್ಲಿ ಸಾಕು ಪ್ರಾಣಿ ಜೊತೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಕರ್ನಾಟಕ ವೈಭವ, ರಾಜಹಂಸ, ನಾನ್ ಎಸಿ ಸ್ಲೀಪರ್ ಮತ್ತು ಎಸಿ ಬಸ್ಗಳಲ್ಲಿ ಕೊಂಡೊಯ್ಯುವ ಹಾಗಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.