ಬೆಂಗಳೂರು:ದೇಸಿ ರಕ್ಷಣಾ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಲ್‌ಸಿಎ ತೇಜಸ್ ಎಂಕೆ1ಎ ಕಾರ್ಯಕ್ರಮಕ್ಕೆ 20 ವಿವಿಧ ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೊಂದಿಗೆ ಹೆಚ್ಎಎಲ್ ಒಪ್ಪಂದಕ್ಕೆ ಸಹಿ ಹಾಕಿದೆ.
2023 ರಿಂದ 2028 ರವರೆಗಿನ ಐದು ವರ್ಷಗಳ ಒಪ್ಪಂದವು 2,400 ಕೋಟಿ ರೂ. ಮೌಲ್ಯದಾಗಿದ್ದು. ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯುನಿಟ್‌ಗಳು, ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು ಮತ್ತು ನೈಟ್ ವಿಷನ್ ಉತ್ಪನ್ನಗಳನ್ನು ಪೂರೈಸಲು ಒಡಂಬಡಿಕೆ ಮಾಡಿಕೊಂಡಿವೆ. ಆತ್ಮ ನಿರ್ಭರ್ ಭಾರತ್ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಕಂಪನಿ ಜೊತೆಗೆ ಎಚ್‌ಎಎಲ್ ಕೈಗೊಂಡ ಅತಿ ದೊಡ್ಡ ಒಡಂಬಡಿಕೆ ಇದಾಗಿದೆ.
ಎಲ್‌ಸಿಎ ತೇಜಸ್ ಕಾರ್ಯಕ್ರಮ ಭಾರತೀಯ ರಕ್ಷಣಾ ಸಂಸ್ಥೆಗಳಾದ ಎಚ್‌ಎಎಲ್, ಡಿಆರ್‌ಡಿಒ ಮತ್ತು ಬಿಇಎಲ್ ಸಮನ್ವಯದಲ್ಲಿ ನಡೆಯುತ್ತಿರುವ ಅತ್ಯುತ್ತಮ ಕೆಲಸದ ಉದಾಹರಣೆಯಾಗಿದೆ. ತೇಜಸ್ ಎಂಕೆ1ಎ ಗಾಗಿ 20 ವಿಧದ ನಿರ್ಣಾಯಕ ಏವಿಯಾನಿಕ್ಸ್ ಉತ್ಪನ್ನಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಪ್ರಸ್ತುತ ಒಡಂಬಡಿಕೆ ಮೇಕ್ ಇನ್ ಇಂಡಿಯಾ ಚಟುವಟಿಕೆಗಾಗಿ ಉತ್ತೇಜನ ನೀಡುವುದಾಗಿದೆ ಎಂದಿದೆ.
ಪ್ರತಿಷ್ಠಿತ ಎಲ್‌ಸಿಎ ತೇಜಸ್ ಕಾರ್ಯಕ್ರಮಕ್ಕಾಗಿ ಹೆಚ್ಎಎಲ್ನಿಂದ ಆರ್ಡರ್ ಸ್ವೀಕರಿಸಲು ನಾವು ಸಂತೋಷಪಡುತ್ತೇವೆ. ಹೆಚ್ಎಎಲ್ನೊಂದಿಗೆ ಬಲವಾದ ಪಾಲುದಾರಿಕೆ ಮತ್ತು ಜಂಟಿ ಕಾರ್ಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ ಎಂದು ಬಿಇಎಲ್ ಮುಖ್ಯಸ್ಥ ಆನಂದಿ ರಾಮಲಿಂಗಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.