ಬೆಂಗಳೂರು:ಲಾಕ್ಡೌನ್ ಸಡಿಲಿಕೆ ಬಳಿಕ ಎಚ್ಎಎಲ್ ಸಿಬ್ಬಂದಿ ಶುಕ್ರವಾರದಿಂದ ಕೆಲಸಕ್ಕೆ ಹಾಜರಾಗುತ್ತಿದ್ದು, ಗುರುವಾರ ನಗರದ ಮಿನ್ಸ್ಕ್ ಸ್ಕ್ವೇರ್ನ ಕಚೇರಿಯಲ್ಲಿ ಸಾನಿಟೈಸ್ ಸಿಂಪಡಣೆ ಮಾಡಲಾಗಿದೆ.
ಲಾಕ್ಡೌನ್ ಸಡಿಲಿಕೆ ಬಳಿಕ ಹೆಚ್ಎಎಲ್ ಅಧಿಕೃತ ಕಾರ್ಯಾರಂಭ
ಲಾಕ್ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆ ಎಚ್ಎಎಲ್ ಇಂದಿನಿಂದ ಕೆಲಸವನ್ನು ಪ್ರಾರಂಭಿಸಿದೆ. ಸಾಮಾಜಿಕ ಅಂತರ ಹಾಗೂ ಕೇಂದ್ರ ಸರ್ಕಾರದ ಕೆಲವು ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಈ ಸಂಸ್ಥೆ ಕಾರ್ಯವನ್ನು ಪ್ರಾರಂಭಿಸಿದೆ.
ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ ಬಳಿಕ ಕೆಲಸಕ್ಕೆ ಅವಕಾಶ ನೀಡಲಾಯಿತು. ಲಾಕ್ಡೌನ್ನಿಂದ ಎಚ್ಎಎಲ್ ಸಂಸ್ಥೆ ಕಾರ್ಯ ಸ್ಥಗಿತಗೊಳಿಸಿತ್ತು. ಆದರೆ, ಇಂದಿನಿಂದ ಸಾಮಾಜಿಕ ಅಂತರ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕಾರ್ಯಾರಂಭಗೊಳಿಸಿದೆ.
ಸಿಬ್ಬಂದಿ ವರ್ಗಕ್ಕೆ ಮಾಸ್ಕ್ ಹಾಗೂ ಗ್ಲೌಸ್ಗಳನ್ನು ಎಚ್ಎಎಲ್ ನೀಡಿದ್ದು, ಕೆಲಸಕ್ಕೆ ಹಾಜರಾಗುವ ಮುನ್ನ ಕೈಗಳನ್ನು ಸಾನಿಟೈಸರ್ನಿಂದ ಶುಚಿಗೊಳಿಸಿ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು. ಅಲ್ಲದೇ ಸಾಮಾಜಿಕ ಅಂತರ ಕಾಪಾಡಲು ಸಂಸ್ಥೆ ಮೀಟಿಂಗ್ಗಳಿಗೆ ವಿಡಿಯೋ ಕಾನ್ಫರೆನ್ಸ್ ಹಾಗೂ ಇ -ಅಪ್ಲಿಕೇಶನ್ ಪ್ರಾರಂಭಿಸಿದೆ ಎಂದು ಎಚ್ಎಎಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.