ಕರ್ನಾಟಕ

karnataka

ETV Bharat / state

ಕೋಸ್ಟ್ ಗಾರ್ಡ್‌ಗೆ ಸ್ವದೇಶಿ ನಿರ್ಮಿತ 16 ಸುಧಾರಿತ ಲಘು ಹೆಲಿಕಾಪ್ಟರ್​ ಎಂಕೆ -III ಹಸ್ತಾಂತರಿಸಿದ ಹೆಚ್​ಎಎಲ್​ - ಭಾರತೀಯ ಕೋಸ್ಟ್ ಗಾರ್ಡ್‌

ಮಾರ್ಚ್ 2017ರಲ್ಲಿ 16 ಎಎಲ್​ಹೆ​ಚ್​ ಎಂಕೆ - III ಪೂರೈಕೆಗಾಗಿ ಒಪ್ಪಂದಕ್ಕೆ ಭಾರತೀಯ ಕೋಸ್ಟ್ ಗಾರ್ಡ್‌ ಮತ್ತು ಹೆಚ್ಎಎಲ್ ಸಂಸ್ಥೆ ಸಹಿ ಹಾಕಿತ್ತು

hal-hands-over-16-alh-mk-iii-aircraft-to-indian-coast-guard
ಕೋಸ್ಟ್ ಗಾರ್ಡ್‌ಗೆ ಸ್ವದೇಶಿ ನಿರ್ಮಿತ 16 ಸುಧಾರಿತ ಲಘು ಹೆಲಿಕಾಪ್ಟರ್​ ಎಂಕೆ -III ಹಸ್ತಾಂತರಿಸಿದ ಹೆಚ್​ಎಎಲ್​

By

Published : Nov 15, 2022, 8:20 PM IST

ಬೆಂಗಳೂರು:ಕಡಲ ಭದ್ರತೆಗೆ ಉತ್ತೇಜನ ನೀಡುವ ಸಲುವಾಗಿ ಸ್ವದೇಶಿ ನಿರ್ಮಿತ 16 ಸುಧಾರಿತ ಲಘು ಹೆಲಿಕಾಪ್ಟರ್​ ಎಂಕೆ -III (advanced light helicopter MK III)ಗಳನ್ನು ಇಂದು ಭಾರತೀಯ ಕೋಸ್ಟ್ ಗಾರ್ಡ್‌ಗೆ ಹೆಚ್ಎಎಲ್ ಸಂಸ್ಥೆ ಹಸ್ತಾಂತರ ಮಾಡಿದೆ. ಇನ್ನೂ 9 ವಿಮಾನಗಳ ತಯಾರಿಕೆ ಒಪ್ಪಂದ ಮಾಡಿಕೊಂಡಿದೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕೋಸ್ಟ್ ಗಾರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ 16 ಎಎಲ್‌ಹೆಚ್‌ಗಳನ್ನು ಹೆಚ್ಎಎಲ್ ಸಿಜಿಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡಿಜಿ ಕೋಸ್ಟ್ ಗಾರ್ಡ್ ವಿಎಸ್ ಪಠಾನಿಯಾ ಅವರಿಗೆ ಹಸ್ತಾಂತರಿಸಲಾಯಿತು.

ಕೋಸ್ಟ್ ಗಾರ್ಡ್‌ಗೆ ಸ್ವದೇಶಿ ನಿರ್ಮಿತ 16 ಸುಧಾರಿತ ಲಘು ಹೆಲಿಕಾಪ್ಟರ್​ ಎಂಕೆ -III ಹಸ್ತಾಂತರಿಸಿದ ಹೆಚ್​ಎಎಲ್​

ಈ ವೇಳೆ, ಡಿಜಿ ಕೋಸ್ಟ್ ಗಾರ್ಡ್ ವಿಎಸ್ ಪಠಾನಿಯಾ ಮಾತನಾಡಿ, ರಕ್ಷಣಾ ಮತ್ತು ಹೆಚ್‌ಎಎಲ್‌ನೊಂದಿಗೆ ಸಂಬಂಧ ಹೊಂದಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಇನ್ನೂ ಒಂಬತ್ತು ಹೆಲಿಕಾಪ್ಟರ್‌ಗಳಿಗೆ ಲೆಟರ್ ಆಫ್ ಇಂಟೆಂಟ್ (ಎಲ್‌ಒಐ) ನೀಡಲು ಸಂತೋಷ ಪಡುತ್ತೇವೆ ಎಂದರು.

ಮಾರ್ಚ್ 2017ರಲ್ಲಿ 16 ಎಎಲ್​ಹೆ​ಚ್​ ಎಂಕೆ - III ಪೂರೈಕೆಗಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಕೋವಿಡ್ ಮಹಾಮಾರಿ ಸಮಯದಲ್ಲೂ ಕೆಲಸವನ್ನು ಮಾಡಿದ ಕಾರ್ಮಿಕರ ಪರಿಶ್ರಮದಿಂದ ಎಲ್ಲ ಹೆಲಿಕಾಪ್ಟರ್‌ಗಳನ್ನು ಕಡಿಮೆ ಸಮಯದಲ್ಲಿ ಹೆಚ್ಎಎಲ್ ತಯಾರಿಸಿದೆ. ಇದು ಭಾರತದ ಕಡಲ ಭದ್ರತೆಯನ್ನು ಬಲಪಡಿಸಲು ನಮಗೆ ನೆರವು ಮಾಡಿಕೊಡುತ್ತದೆ ಎಂದು ಹೇಳಿದರು.

ಕೋಸ್ಟ್ ಗಾರ್ಡ್‌ಗೆ ಸ್ವದೇಶಿ ನಿರ್ಮಿತ 16 ಸುಧಾರಿತ ಲಘು ಹೆಲಿಕಾಪ್ಟರ್​ ಎಂಕೆ -III ಹಸ್ತಾಂತರಿಸಿದ ಹೆಚ್​ಎಎಲ್​

ಇದು ನಮ್ಮ ಎಲ್ಲ ಭವಿಷ್ಯದ ಒಪ್ಪಂದಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಎಲ್ಲ ಗ್ರಾಹಕರ ಹಿತದೃಷ್ಟಿಯಿಂದ ಕೆಲಸವನ್ನು ವೇಗಗೊಳಿಸಲು ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ಮೇಕ್ ಇನ್ ಇಂಡಿಯಾ ಚಟುವಟಿಕೆಗಳನ್ನು ಬಲಪಡಿಸಲು ಖಾಸಗಿ ಪಾಲುದಾರರೊಂದಿಗೆ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಹೆಲಿಕಾಪ್ಟರ್ ಕಾಂಪ್ಲೆಕ್ಸ್ ಹೆಚ್​ಎಎಲ್ ಸಂಸ್ಥೆಯ ಸಿಇಒ ಎಸ್ ಅನ್ಬುವೇಲನ್ ಮಾತನಾಡಿ, ನಮ್ಮ ಒಪ್ಪಂದದ ಅನುಷ್ಠಾನದಲ್ಲಿನ ಪ್ರಮುಖ ಸವಾಲುಗಳು ಮತ್ತು ವಿದೇಶಿ ಒಇಎಂಗಳಿಂದ ಪಡೆದ ಹೊಸ ವ್ಯವಸ್ಥೆಗಳ ಏಕೀಕರಣ, ಪ್ರಮಾಣೀಕರಣಗಳಿಗಾಗಿ ವಿಮಾನ ಪ್ರಯೋಗಗಳನ್ನು ನಡೆಸುವುದು ಮತ್ತು ಪೂರೈಕೆ ಸರಪಳಿಯಲ್ಲಿನ ಅಡಚಣೆಗಳ ನಿವಾರಿಸುವುದರ ಬಗ್ಗೆ ವಿವರಿಸಿದರು.

ಎಎಲ್‌ಹೆಚ್‌ ಎಂಕೆ III ಹೆಲಿಕಾಪ್ಟರ್​ಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ ಮತ್ತು ಹೆಚ್​ಎಎಲ್​ನಿಂದ ಉತ್ಪಾದಿಸಲಾಗಿದೆ. ಕಂಪನಿಯು ಇಲ್ಲಿಯವರೆಗೆ 330 ಎಎಲ್‌ಹೆಚ್‌ಗಳನ್ನು ಉತ್ಪಾದಿಸಿದೆ. ಇದು ಬಹುಮುಖ ಹೆಲಿಕಾಪ್ಟರ್‌ಗಳು 3.74 ಲಕ್ಷಕ್ಕೂ ಹೆಚ್ಚು ಗಂಟೆಗಳ ಕಾಲ ಹಾರುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಸ್ಟಾರ್ಟಪ್​ ಕಂಪನಿಗೆ ಫ್ಲೈಟ್ ಟರ್ಮಿನೇಷನ್ ಸಿಸ್ಟಮ್ ತಂತ್ರಜ್ಞಾನ ನೀಡಿದ ಇಸ್ರೊ

ABOUT THE AUTHOR

...view details