ಕರ್ನಾಟಕ

karnataka

ETV Bharat / state

ಗ್ರಾಪಂ​ ಚುನಾವಣೆಯಲ್ಲಿ ಗೆಲುವು: ಹೆಚ್​ಎಎಲ್​ ಉದ್ಯೋಗ ತೊರೆಯಲು ಮುಂದಾದ ಅಭ್ಯರ್ಥಿ - ಎಚ್ಎಎಲ್​ನಲ್ಲಿ ಏರ್ ಕ್ರಾಫ್ಟ್ ಟೆಕ್ನಿಷಿಯನ್ ದೇವರಾಜ್ ಗೆಲುವು

ದೇವರಾಜ್​ ಹೆಚ್ಎಎಲ್​ನ ಉನ್ನತ ಉದ್ಯೋಗದಲ್ಲಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಹೆಚ್ಎಎಲ್​ನ ಉದ್ಯೋಗಿ ದೇವರಾಜ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕರ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.

election
ಬೆಂಗಳೂರು

By

Published : Dec 30, 2020, 9:30 PM IST

ಬೆಂಗಳೂರು: ಗ್ರಾಪಂ ಚುನಾವಣೆಯಲ್ಲಿ ಗೆದ್ದ ಸದಸ್ಯರೊಬ್ಬರು ಕೇಂದ್ರ ಸರ್ಕಾರದ ಹೆಚ್ಎಎಲ್ ಕಂಪನಿ ಉದ್ಯೋಗಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಹೆಚ್​ಎಎಲ್​ ಉದ್ಯೋಗ ತೊರೆಯಲು ಮುಂದಾದ ಗೆದ್ದ ಅಭ್ಯರ್ಥಿ

ಕೇಂದ್ರ ಸರ್ಕಾರದ ಹೆಚ್ಎಎಲ್​ನಲ್ಲಿ ಏರ್ ಕ್ರಾಫ್ಟ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ 50 ವರ್ಷದ ಆವಲಹಳ್ಳಿಯ ಚೀಮಸಂದ್ರ ನಿವಾಸಿಯಾದ ದೇವರಾಜ್ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಟೋ ಚಿಹ್ನೆಯ ಮೂಲಕ ಗೆದ್ದಿದ್ದಾರೆ. ಹಾಗಾಗಿ ನಾಳೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಆವಲಹಳ್ಳಿ ಗ್ರಾಮ‌ ಪಂಚಾಯಿತಿ ಆವಲಹಳ್ಳಿ ಗ್ರಾಮದ ವಾರ್ಡ್ ನಂ.6ರಲ್ಲಿ ದೇವರಾಜ್ ಮತ್ತು ಪತ್ನಿ ಜೋತಿ ಕಣದಲ್ಲಿದ್ದರು. ಇಂದು ಇಬ್ಬರೂ ಜಯಶೀಲರಾಗಿದ್ದಾರೆ. ಈ ಸಂದರ್ಭ ಹೆಚ್​ಎಎಲ್​ನ ನೂರಾರು ಸಹೊದ್ಯೋಗಿಗಳು ಬಂದು ಸಿಹಿ ಹಂಚಿ ಶುಭ ಕೋರಿದರು.

ದೇವರಾಜ ಹೆಚ್ಎಎಲ್​ನ ಉನ್ನತ ಉದ್ಯೋಗದಲ್ಲಿದ್ದು, ಪತ್ನಿ ಜ್ಯೋತಿ ಈ ಹಿಂದೆ ಆವಲಹಳ್ಳಿ ಪಂಚಾಯಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಹೆಚ್ಎಎಲ್​ನ ಉದ್ಯೋಗಿ ದೇವರಾಜ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕರ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ನಂತರ ಹೆಚ್ಎಎಲ್​ನ ನೌಕರರ ಸೊಸೈಟಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

ABOUT THE AUTHOR

...view details