ಕರ್ನಾಟಕ

karnataka

ETV Bharat / state

ಕೋವಿಡ್​ ಕೇರ್​ ಸೆಂಟರ್​ಗೆ 50 ಆಕ್ಸಿಜನ್​ ಬೆಡ್​ ನೀಡಿದ ಕೆಪಿಟಿಸಿಎಲ್

ಬಿಬಿಎಂಪಿ ಹೆಚ್​ಎಎಲ್​​ ನಲ್ಲಿ ನಿರ್ಮಾಣ ಮಾಡಿರುವ ಕೋವಿಡ್ ಕೇರ್ ಸೆಂಟರ್​​ಗೆ ಕೆಪಿಟಿಸಿಎಲ್ 50 ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಿದೆ.

By

Published : May 14, 2021, 9:50 PM IST

kptcl
kptcl

ಬೆಂಗಳೂರು: ಬಿಬಿಎಂಪಿ ಹೆಚ್​ಎಎಲ್​​ ನಲ್ಲಿ ನಿರ್ಮಾಣ ಮಾಡಿರುವ ಕೋವಿಡ್ ಕೇರ್ ಸೆಂಟರ್​​ಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ಕೆಪಿಟಿಸಿಎಲ್) ಹಾಗೂ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. ಜನರಲ್ ಬೆಡ್​ಗೆ ಸೀಮಿತವಾಗಿದ್ದ ಸಿಸಿಸಿ ಕೇಂದ್ರದಲ್ಲಿ ಈಗ 50 ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳು ಲಭ್ಯ ಇವೆ.

ಆಮ್ಲಜನಕ, ಐಸಿಯು, ವೆಂಟಿಲೇಟರ್ ಬೆಡ್​ಗಳ ಬೇಡಿಕೆ ಹೆಚ್ಚಿರುವುದರಿಂದ ಕೆಪಿಟಿಸಿಎಲ್ ಈ ಸಿಸಿಸಿ ಕೇಂದ್ರದಲ್ಲಿ 40 ಆಮ್ಲಜನಕ ಸೌಲಭ್ಯವಿರುವ ಹೆಚ್ ಡಿಯು ಬೆಡ್ ನಿರ್ಮಾಣ ಮಾಡಿಕೊಟ್ಟಿದೆ. ಕೇವಲ 12 ದಿನದಲ್ಲಿ ನಿಮಿಷಕ್ಕೆ 330 ಲೀಟರ್ ವೈದ್ಯಕೀಯ ಆಕ್ಸಿಜನ್ ಉತ್ಪಾದಿಸುವ ಪಿಎಸ್ ಎ ಪ್ಲಾಂಟ್ (PSA- Pressure Swing Adsorption) ನಿರ್ಮಾಣ ಮಾಡಿ, 40 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಯ ಪೈಪ್‌ಲೈನ್ ಅಳವಡಿಸಿ, ಜನರೇಟರ್ ವ್ಯವಸ್ಥೆ, ವೈದ್ಯರನ್ನು ಸಹ ನೀಡಿದೆ. ಇದಕ್ಕೆ ಒಟ್ಟು 73.28 ಲಕ್ಷ ವೆಚ್ಚವಾಗಿದ್ದು, ಸಿಎಸ್​ಆರ್ ಫಂಡ್​ನಿಂದ 21.50 ಲಕ್ಷ ಸಂಗ್ರಹಿಸಲಾಗಿದೆ. ವಿವಿಧ ಉದ್ಯಮಿಗಳು, ಬೆಸ್ಕಾಂ, ಅಧಿಕಾರಿಗಳು, ಸ್ನೇಹಿತರು ಕೂಡಾ ಕೈಜೋಡಿಸಿದ್ದಾರೆ ಎಂದು ಕೆಪಿಟಿಸಿಎಲ್ ತಿಳಿಸಿದೆ.

ಡಾಕ್ಟರ್ಸ್ ಫಾರ್ ಯು ಖಾಸಗಿ ಸಂಸ್ಥೆಯೂ ವೈದ್ಯರ ಅವಶ್ಯಕತೆಯನ್ನು ಪೂರೈಸಲು ಸಿದ್ಧವಿದೆ. ಬಿಬಿಎಂಪಿ ಆಕ್ಸಿಜನ್ ವ್ಯವಸ್ಥೆಯೂ ಸೇರಿದಂತೆ ಹೆಚ್ಎಲ್‌ ಸಿಸಿಸಿ ಕೇಂದ್ರದಲ್ಲಿ ಒಟ್ಟು 50 ಹೆಚ್​ಡಿಯು ಬೆಡ್ ಸೌಲಭ್ಯ ಇಂದಿನಿಂದ ಆರಂಭವಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಮಂಜುಳಾ ತಿಳಿಸಿದ್ದಾರೆ.

ABOUT THE AUTHOR

...view details