ಕರ್ನಾಟಕ

karnataka

ETV Bharat / state

ಕೆಲಸ ಕೊಡಿಸೋ ನೆಪದಲ್ಲಿ 40 ಸಾವಿರ ನುಂಗಿದ ಖದೀಮರು: ಇವರು ಆನ್​ಲೈನ್​​ ಜೇಬುಗಳ್ಳರು - Bank account hack

ಕೆಲಸ ಕೊಡಿಸುವ ನೆಪದಲ್ಲಿ ಆನ್​​​ಲೈನ್ ಮೂಲಕ ಸೈಬರ್ ಕಳ್ಳರು ಸಾವಿರಾರು ರೂಪಾಯಿ ವಂಚನೆಗಿಳಿದಿದ್ದಾರೆ. ಕೆಲಸ ಕಳೆದುಕೊಂಡವರು ಹಲವೆಡೆ ಕೆಲಸಕ್ಕಾಗಿ ಅರ್ಜಿ ಹಾಕುತ್ತಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಆನ್​​ಲೈನ್ ಮೂಲಕವೇ ಬ್ಯಾಂಕ್ ಖಾತೆ ಬರಿದಾಗಿಸುತ್ತಿದ್ದಾರೆ.

Hackers withdrew  40 thousands  from account for offering job in Online site
ಕೆಲಸ ಕೊಡಿಸೊ ನೆಪದಲ್ಲಿ 40 ಸಾವಿರ ನುಂಗಿದ ಖದೀಮರು...ಆನ್​ಲೈನ್​​​​​ನಲ್ಲಿದ್ದಾರೆ ಜೇಬುಗಳ್ಳರು

By

Published : Jul 23, 2020, 9:21 PM IST

ಬೆಂಗಳೂರು: ಕೊರೊನಾ ಕಾರಣದಿಂದಾಗಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿದೆ. ಆದರೆ ಸೈಬರ್ ಖದೀಮರ ಹಾವಳಿ ಮಾತ್ರ ಜಾಸ್ತಿಯಾಗಿದೆ. ಆನ್​ಲೈನ್​​​​ನಲ್ಲಿ ಕೆಲಸ ಹುಡುಕುವವರು ಹಾಗೆ ಆನ್​​ಲೈನ್​ನಲ್ಲೇ ಜಾಸ್ತಿ ಹೊತ್ತು ಇರುವವರನ್ನೇ ಟಾರ್ಗೆಟ್ ಮಾಡಿಕೊಂಡು ಸೈಬರ್ ಖದೀಮರು ಹಣ ಲೂಟಿ ಮಾಡ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ವಾಸವಿದ್ದ ನಾಗಭೂಷಣ್ ಎಂಬುವವರು ಕೆಲಸಕ್ಕಾಗಿ ಆನ್​​ಲೈನ್​​​ ಮೊರೆ ಹೋಗಿ, ಕೆಲ ವೆಬ್​ಸೈಟ್​​ಗಳಿಗೆ ಲಾಗಿನ್ ಆಗಿದ್ದಾರೆ‌. ವೆಬ್​ಸೈಟ್​​​ಗೆ ಲಾಗಿನ್ ಆಗುತ್ತಿದ್ದಂತೆ ಅಪರಿಚಿತರಿಂದ ಕರೆ ಬಂದು ತಾವು ಶೈನ್ ಡಾಟ್ ಕಾಮ್​​ನಿಂದ ಕರೆ ಮಾಡುತ್ತಿದ್ದೇವೆ. ನೀವು ಕೆಲಸಕ್ಕಾಗಿ ವೆಬ್​​​​ಸೈಟ್​​​ ಲಾಗಿನ್ ಆಗಿದ್ರಿ, ನಿಮ್ಮ ಪ್ರೊಫೈಲ್ ಅಪ್ರೂವಲ್ ಆಗಿದೆ ಎಂದಿದ್ದಾರೆ‌.

ಕೆಲಸ ಕೊಡಿಸೊ ನೆಪದಲ್ಲಿ 40 ಸಾವಿರ ನುಂಗಿದ ಖದೀಮರು, ಆನ್​ಲೈನ್​​​​​ನಲ್ಲಿದ್ದಾರೆ ಜೇಬುಗಳ್ಳರು

ನಾಗಭೂಷಣ್ ಕೆಲಸ ಸಿಗುವ ಖುಷಿಯಲ್ಲಿ ಖದೀಮರು ಹೇಳಿದ್ದನ್ನೆಲ್ಲಾ ನಂಬಿದ್ದಾರೆ. ಈ ವೇಳೆ ಆರೋಪಿಗಳು ನಾವು ನಿಮಗೆ ರೆಫರೆನ್ಸ್ ಐಡಿ ನೀಡುತ್ತೇವೆ. ಕೇವಲ 10 ರೂಪಾಯಿ ಅರ್ಜಿ ಶುಲ್ಕವನ್ನು ಆನ್​​​​ಲೈನ್​​​ ಮೂಲಕ ಪೇ ಮಾಡಬೇಕು, ಕೆಳಗೆ ಲಿಂಕ್ ಬರುತ್ತೆ ನೀವು ಅದನ್ನು ಕ್ಲಿಕ್ ಮಾಡಿದ್ರೆ ಪೇಮೆಂಟ್ ಆಗುತ್ತದೆ ಎಂದು ಹೇಳಿದ್ದಾರೆ.

ನಾಗಭೂಷಣ್ ಅಕೌಂಟ್ ಖಾಲಿ:

ಇನ್ನು ನಾಗಭೂಷಣ್ ಈ ಸಂದರ್ಭದಲ್ಲಿ ಕೆಲಸ ಸಿಗುವ ಖುಷಿಯಲ್ಲಿ 10 ರೂಪಾಯಿ ಹಾಕಿ ಅರ್ಜಿ ತುಂಬಿ ಆರೋಪಿಗಳು ಕಳುಹಿಸಿದ ಲಿಂಕ್‌ಗೆ ಹಣ ಹಾಕಿದ್ದಾರೆ. ಇನ್ನೂ ಸಿಸ್ಟಮ್​ನಲ್ಲಿ ಅರ್ಜಿ ಹಾಕುವಾಗ ಎರೆರ್ ಎಂದು ತೋರಿಸಿದ್ದ ಹಿನ್ನೆಲೆಯಲ್ಲಿ ಅಕೌಂಟ್​​​ನಿಂದ ಹಣ ಕಟ್ಟಾಗಿದ್ದರ ಬಗ್ಗೆ ನಿಗಾ ವಹಿಸಿಲ್ಲ. ತದ ನಂತರ ವಿಚಾರ ತಿಳಿದು ಕೂಡಲೇ ನಂಬರ್​ಗೆ ಕರೆ ಮಾಡಿ ಎರರ್ ಬರ್ತಿದೆ ಎಂದು ತಿಳಿಸಿದಾಗ ಒಟಿಪಿ ಬರುತ್ತೆ ನಿಮ್ಮ ನಂಬರ್​ಗೆ ಅದನ್ನು ಹಾಕಿ ಎಂದಿದ್ದಾರೆ. ಒಟಿಪಿ ಹಾಕಿದ ಕೂಡಲೇ ಮತ್ತೆ ಎರರ್ ಬಂದಿದೆ. ಆದರೆ ಅಕೌಂಟ್​​​​ನಿಂದ 40 ಸಾವಿರ ರೂಪಾಯಿ ಡೆಬಿಟ್ ಆಗಿದೆ.

ಕೂಡಲೇ ಕರೆ ಕಟ್ ಆದ ಕಾರಣ ಅನುಮಾನ ಬಂದು ಮೊಬೈಲ್​​ಗೆ ಬಂದ ಮೆಸೇಜ್ ನೋಡಿದ್ದ ನಾಗಭೂಷಣ್​​ ಪ್ರಜ್ಞೆ ತಪ್ಪಿದಂತಾಗಿದೆ. ಏಕಂದ್ರೆ ಅಕೌಂಟ್​​ನಿಂದ 40 ಸಾವಿರ ಹಣ ಸೈಬರ್ ಖದೀಮರ ಪಾಲಾಗಿತ್ತು. ಬಳಿಕ ಕರೆ ಮಾಡಿದ್ರೆ ಸ್ವಿಚ್ ಆಫ್​​ ಆಗಿದ್ದು ಸದ್ಯ ದಕ್ಷಿಣ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸಿಟಿಯಲ್ಲಿ ಸೈಬರ್ ಹಾವಳಿ ಹೆಚ್ಚಾದ ಹಿನ್ನೆಲೆ ಈ ಕುರಿತು ಕಮಿಷನರ್ ಭಾಸ್ಕರ್ ರಾವ್ ಸೈಬರ್ ಟೀಂ ಜೊತೆ ಸಭೆ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ ಸೈಬರ್ ಹ್ಯಾಕರ್ಸ್​​ಗಳ ಹಾವಳಿ ಹೆಚ್ಚಾಗ್ತಿದೆ. ಈ ಬಗ್ಗೆ ಸೈಬರ್ ಟೀಂ ಅಲರ್ಟ್ ಇರಬೇಕು ನಗರದಲ್ಲಿ ಸೈಬರ್ ಹಾವಳಿ ತಪ್ಪಿಸಿ ಆರೋಪಿಗಳ ಹೆಡೆಮುರಿಕಟ್ಟುವಂತೆ ಸೂಚಿಸಿದ್ದಾರೆ.

ABOUT THE AUTHOR

...view details