ಕರ್ನಾಟಕ

karnataka

ETV Bharat / state

ಭಾರತದ ನಂಬರ್ ಒನ್ ಹ್ಯಾ'ಕಿಂಗ್‌' ಶ್ರೀಕಿ ಮತ್ತೆ ಸಿಸಿಬಿ ವಶಕ್ಕೆ : ತನಿಖೆ ಚುರುಕು

ಈತ ಭಾರತದಲ್ಲಿ ದೊಡ್ಡ ಹ್ಯಾಕರ್ ಆಗಿದ್ದಾನೆ. ಸದ್ಯ ತನಿಖೆ ವೇಳೆ ಮತ್ತಷ್ಟು ವೆಬ್​ಸೈಟ್ಸ್​ ಹ್ಯಾಕಿಂಗ್ ಮಾಡಿರುವ ವಿಚಾರ ಬೆಳಕಿಗೆ ಬರುವ ಸಾಧ್ಯತೆ ಹಿನ್ನೆಲೆ 13 ದಿನ ಕಸ್ಟಡಿಗೆ ತೆಗೆದುಕೊಂಡ ಸಿಸಿಬಿ ಹೆಚ್ಚಿನ ಮಾಹಿತಿ ಕಲೆ ಹಾಕ್ತಿದೆ..

custody
ಹ್ಯಾಕರ್​ ಶ್ರೀಕಿ

By

Published : Dec 2, 2020, 2:36 PM IST

ಬೆಂಗಳೂರು :ಭಾರತದ ನಂಬರ್ ಒನ್ ಹ್ಯಾ'ಕಿಂಗ್' ಶ್ರೀಕಿಯನ್ನ ಮತ್ತೆ ಸಿಸಿಬಿ ವಶಕ್ಕೆ ಪಡೆಯಲಾಗಿದೆ. ಡ್ರಗ್ಸ್‌ ಕೇಸ್​ನಲ್ಲಿ ಸಿಕ್ಕಿಬಿದ್ದ ಶ್ರೀಕಿಯನ್ನ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದಾಗ ಹ್ಯಾಕಿಂಗ್ ಕಹಾನಿ ಬೆಳಕಿಗೆ ಬಂದಿದೆ. ಸಾಲು ಸಾಲು ವೆಬ್​ಸೈಟ್ ಹ್ಯಾಕ್ ಮಾಡಿದ ಶ್ರೀಕೃಷ್ಣ ಮತ್ತೆ ಸಿಸಿಬಿ ಖೆಡ್ಡಾಗೆ ಬಿದ್ದಿದ್ದಾನೆ.

ಮೊದಲು ಡ್ರಗ್ಸ್ ಕೇಸ್ ಸಂಬಂಧ ಕೋರ್ಟ್ ಈತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈಗ ಹ್ಯಾಕಿಂಗ್ ಕೇಸ್ ದಾಖಲಿಸಿ ಮತ್ತೆ ಸಿಸಿಬಿ ಶ್ರೀಕಿಯನ್ನು ವಶಕ್ಕೆ ಪಡೆದು ಹ್ಯಾಕಿಂಗ್ ವಿಚಾರವಾಗಿ ಹಲವಾರು ಮಾಹಿತಿ ಪಡೆಯಲಿದೆ.

ಈತ ಭಾರತದಲ್ಲಿ ದೊಡ್ಡ ಹ್ಯಾಕರ್ ಆಗಿದ್ದಾನೆ. ಸದ್ಯ ತನಿಖೆ ವೇಳೆ ಮತ್ತಷ್ಟು ವೆಬ್​ಸೈಟ್ಸ್​ ಹ್ಯಾಕಿಂಗ್ ಮಾಡಿರುವ ವಿಚಾರ ಬೆಳಕಿಗೆ ಬರುವ ಸಾಧ್ಯತೆ ಹಿನ್ನೆಲೆ 13 ದಿನ ಕಸ್ಟಡಿಗೆ ತೆಗೆದುಕೊಂಡ ಸಿಸಿಬಿ ಹೆಚ್ಚಿನ ಮಾಹಿತಿ ಕಲೆ ಹಾಕ್ತಿದೆ.

ಈತನನ್ನ ಡ್ರಗ್ಸ್‌ ಪ್ರಕರಣದಲ್ಲಿ ಮೊದಲು ಅರೆಸ್ಟ್ ಮಾಡಲಾಗಿತ್ತು. ಈ ವೇಳೆ ಆರೋಪಿ ಸಿಸಿಬಿ ಪೊಲೀಸರ ಎದುರು ತನಗೆ ಡ್ರಗ್ಸ್ ಬೇಕು. ಇಲ್ಲಾಂದ್ರೆ ತನಗೆ ಇರೋಕ್ಕೆ ಆಗಲ್ಲವೆಂದು ಹಠ ಮಾಡುತ್ತಿದ್ದ. ಹಾಗೆ ತನಿಖೆಗೆ ಸರಿಯಾದ ಸಹಕಾರ ನೀಡ್ತಿರಲಿಲ್ಲ. ಸದ್ಯ ಸರ್ಕಾರಿ ಆ್ಯಪ್ ಸೇರಿ ಬಹಳಷ್ಟು ಆ್ಯಪ್ ಹ್ಯಾಕ್ ಮಾಡಿದ ಕಾರಣ ಸಿಸಿಬಿ ಅಧಿಕಾರಿಗಳು ಟೆಕ್ನಿಕಲ್ ಆ್ಯಂಗಲ್​​ನಲ್ಲಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details