ಕರ್ನಾಟಕ

karnataka

ETV Bharat / state

ಬಿಎಸ್​ವೈ ನೀವು ಸಿಎಂ ಆಗಲು ಕಾರಣರಾದವರಿಗೆ ಮಂತ್ರಿ ಮಾಡಬೇಕು: ಹೆಚ್​.ವಿಶ್ವನಾಥ್​​ ಆಗ್ರಹ - ಎಚ್.ವಿಶ್ವನಾಥ್ ಹುಣಸೂರು ಪ್ರತ್ಯೇಕ ಜಿಲ್ಲೆಯ ಬೇಡಿಕೆ

ಕಾಂಗ್ರೆಸ್ ಹಾಗೂ ಬಿಜೆಪಿ ದೆಹಲಿ ಬೇಸ್ ಪಕ್ಷಗಳಾಗಿವೆ. ಯಾವಾಗ ಅನುಮತಿ ಸಿಗುತ್ತದೋ ಆಗ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

h-viswanath-talk
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್

By

Published : Nov 27, 2020, 3:44 PM IST

Updated : Nov 27, 2020, 4:22 PM IST

ಬೆಂಗಳೂರು:ನೀವು ಮುಖ್ಯಮಂತ್ರಿ ಆಗಲು ಕಾರಣರಾದವರಿಗೆ ಮಂತ್ರಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಹೆಚ್​.ವಿಶ್ವನಾಥ್​​ ಆಗ್ರಹ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯದ ಭೈರತಿ ಬಸವರಾಜುಗೆ ಸಚಿವ ಸ್ಥಾನ ನೀಡಿದ್ದಾರೆ. ಉಳಿದ ಮೂವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹಾಗೂ ಬಿಜೆಪಿ ದೆಹಲಿ ಬೇಸ್ ಪಕ್ಷಗಳಾಗಿವೆ. ಯಾವಾಗ ಅನುಮತಿ ಸಿಗುತ್ತದೆ ಆಗ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.

ಹುಣಸೂರು ಜಿಲ್ಲೆ ರಚಿಸುವಂತೆ ಮನವಿ:

ವಿಜಯನಗರ ಪ್ರತ್ಯೇಕ ಜಿಲ್ಲೆ ಬೇಡಿಕೆ ಬೆನ್ನಲ್ಲೇ ಹೆಚ್.ವಿಶ್ವನಾಥ್ ಹುಣಸೂರು ಪ್ರತ್ಯೇಕ ಜಿಲ್ಲೆಯ ಬೇಡಿಕೆ ಇಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಹುಣಸೂರಿಗೆ ಬಂದಾಗ ಹುಣಸೂರು ಜಿಲ್ಲೆ ಮಾಡಿ ಎಂದು ಬೇಡಿಕೆ ಇಡಲಾಗಿತ್ತು. ಆರು ತಾಲೂಕು ಸೇರಿ ದೇವರಾಜ್ ಅರಸು ಹೆಸರಿನಲ್ಲಿ ಜಿಲ್ಲೆ ಮಾಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಮೈಸೂರು ನಗರದ ಒತ್ತಡ ಕಾರಣದಿಂದ ಜಿಲ್ಲಾಧಿಕಾರಿ ಹುಣಸೂರು ಭಾಗಕ್ಕೆ ಅಪರೂಪಕ್ಕೆ ಬರುತ್ತಾರೆ. ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಸಚಿವ ಆನಂದ್ ಸಿಂಗ್ ಒತ್ತಡ ಹಾಕಿದ್ದರು ಎಂದರು.

ಕುರುಬ ಸಮುದಾಯದ ಸ್ವಾಮೀಜಿಗಳು, ಜನಪ್ರತಿನಿಧಿಗಳು ಸಿಎಂ ಬಿಎಸ್​​ವೈ ಭೇಟಿ ಮಾಡಿ ಮೂರು ಪ್ರಮುಖ ಬೇಡಿಕೆ ಇಟ್ಟಿದ್ದಾರೆ. ಕುರುಬ ಸಮುದಾಯವನ್ನು ಎಸ್​​ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ಮನವಿ ಮಾಡಿದ್ದೇವೆ. ಕುರುಬ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 500 ಕೋಟಿ ನೀಡಬೇಕು ಎಂದು ಆಗ್ರಹಿಸಲಾಗಿದೆ ಎಂದರು.

ಇದನ್ನೂ ಓದಿ:ರಾಜೀವ್ ಗಾಂಧಿ ಹತ್ಯೆ ಕೇಸ್​: ಅಪರಾಧಿಯ ಪೆರೋಲ್ ಅವಧಿ ವಿಸ್ತರಿಸಿದ ಸುಪ್ರೀಂ

Last Updated : Nov 27, 2020, 4:22 PM IST

ABOUT THE AUTHOR

...view details