ಬೆಂಗಳೂರು: ನಾನು ಸಚಿವ ಸ್ಥಾನಕ್ಕಾಗಿ ಯಾರ ಬಾಗಿಲಿಗೂ ಹೋಗುವ ವ್ಯಕ್ತಿಯಲ್ಲ. ಹಳಬರು - ಹೊಸಬರನ್ನು ಮಿಕ್ಸ್ ಮಾಡಿ ಮಂತ್ರಿಮಂಡಲ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಕೆ. ಕೆ.ಗೆಸ್ಟ್ಹೌಸ್ನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡಿದವರಿಗೆ ನೀಡುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೇಂದ್ರದಲ್ಲಿ ಮೋದಿ ಯಾವ ಫಾರ್ಮುಲಾ ಇಟ್ಟುಕೊಂಡು ಸಂಪುಟ ರಚನೆ ಮಾಡಿದ್ದಾರೋ, ಅದೇ ರೀತಿ ಮಾಡಲಿ ಎಂದಿದ್ದಾರೆ.
ಈ ಹಿಂದೆ ಸಚಿವರಾದವರು ತ್ಯಾಗ ಮಾಡಲು ರೆಡಿಯಾಗಿದ್ದರು. ಆದರೆ, ಅವರ ಮಕ್ಕಳು, ಮರಿ ಮಕ್ಕಳು, ಹೆಂಡತಿ ಬಿಡುವುದಿಲ್ಲ ಬೇಕು ಬೇಕು ಅಂತಾರೆ ಎಂದು ಸೂಚ್ಯವಾಗಿ ನುಡಿದಿದ್ದಾರೆ. ಯಡಿಯೂರಪ್ಪ ಅವರು ಸ್ವಯಂ ಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಆ ಸ್ಥಾನಕ್ಕೆ ಬೊಮ್ಮಾಯಿ ಅವರನ್ನು ತಂದಿದ್ದಾರೆ.