ಬೆಂಗಳೂರು:ಜಿಂದಾಲ್‌ಗೆ ಕೊಟ್ಟ ಭೂಮಿಯನ್ನು ವಾಪಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸ್ವಾಗತಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು 3,667 ಎಕರೆಯನ್ನ 1.20 ಲಕ್ಷಕ್ಕೆ ಸೇಲ್ ಡೀಡ್ ಮಾಡಿದ್ದರು. ಆಗ ಇದನ್ನ ನಾನು ತೀವ್ರವಾಗಿ ವಿರೋಧಿಸಿದ್ದೆ. ನನ್ನ ಜೊತೆ ನಮ್ಮ ಪಕ್ಷದ ಕೆಲ ಶಾಸಕರು, ಸಚಿವ ಆನಂದ್ ಸಿಂಗ್ ಕೂಡ ವಿರೋಧಿಸಿದ್ದರು. ಇದೀಗ ಆ ಭೂಮಿಯನ್ನು ವಾಪಸ್ ಪಡೆಯುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹಾಗಾಗಿ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಸಂಪುಟದ ತೀರ್ಮಾನ ಸ್ವಾಗತಿಸಿದ ಹೆಚ್ ವಿಶ್ವನಾಥ್ ಸಂಪುಟದ ಮುಖ್ಯಸ್ಥರಾದ ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳು ಮತ್ತು ನನ್ನನ್ನು ಬೆಂಬಲಿಸಿದ್ದ ಶಾಸಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಡಿಯೋ ಸಂದೇಶದ ಮೂಲಕ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಜಿಂದಾಲ್‌ಗೆ ಭೂಮಿ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ವಿಶ್ವನಾಥ್, ಈ ಸರ್ಕಾರವನ್ನು ತಂದಿದ್ದಕ್ಕೆ ಪಶ್ಚಾತ್ತಾಪ ಆಗುತ್ತಿದೆ ಎಂದು ಯಡಿಯೂರಪ್ಪ ಅವರನ್ನು ಸೇರಿಸಿ ಟೀಕೆ ಮಾಡಿದ್ದರು. ಇದೀಗ ಸಂಪುಟವು ಭೂಮಿ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದಕ್ಕೆ ಸರ್ಕಾರಕ್ಕೆ ವಿಶ್ವನಾಥ್ ಧನ್ಯವಾದ ಸಲ್ಲಿಸಿದ್ದಾರೆ.
ಓದಿ:ನಾಯಕತ್ವ ಬದಲಾವಣೆ ವದಂತಿಗೆ ಬಿಎಸ್ವೈ ಡೋಂಟ್ ಕೇರ್: ಕೋವಿಡ್ ನಿರ್ವಹಣೆಯತ್ತ ಸಿಎಂ ಚಿತ್ತ..!