ಕರ್ನಾಟಕ

karnataka

ETV Bharat / state

'ಸಿದ್ಧಹಸ್ತರ ಫರ್ಮಾನು' ಜನರು ಇವರ ಜೇಬಿನಲ್ಲಿ ಇದ್ದಾರಾ?: ಹೆಚ್​ಡಿಕೆ‌ ಕಿಡಿ - H D Kumaraswamy talk about siddaramaiah

ಸಿದ್ದರಾಮಯ್ಯ ಸಿಂದಗಿ ಜನರಿಗೆ ಅಪಮಾನ ಮಾಡುವ ಅಹಂಕಾರದ ಹೇಳಿಕೆ ನೀಡಿದ್ದಾರೆ. ಅವರಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಉಪ ಚುನಾವಣೆಯಲ್ಲಿ ಎಂ.ಸಿ.ಮನಗೂಳಿ ನಿಧನದ ಅನುಕಂಪದಲ್ಲಿ ತೇಲುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಚ್​ಡಿಕೆ ಟೀಕಿಸಿದ್ದಾರೆ.

H D Kumaraswamy outrage against Siddaramaiah
ಹೆಚ್​ಡಿಕೆ‌ ಕಿಡಿ

By

Published : Oct 10, 2021, 11:53 AM IST

ಬೆಂಗಳೂರು: ಬುದ್ಧಿವಂತ ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ಹಾಕಲ್ಲ ಎಂದು ಸಿದ್ಧಹಸ್ತರು ಫರ್ಮಾನು ಹೊರಡಿಸಿದ್ದಾರೆ. ಜನರು ಇವರ ಜೇಬಿನಲ್ಲಿ ಇದ್ದಾರಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಸಿಂದಗಿ ಜನರಿಗೆ ಅಪಮಾನ ಮಾಡುವ ಅಹಂಕಾರದ ಹೇಳಿಕೆ. ಮತದಾರರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಈಗ ಎಂ.ಸಿ.ಮನಗೂಳಿ ನಿಧನದ ಅನುಕಂಪದಲ್ಲಿ ತೇಲುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿದ್ದ ಅವರ ಪುತ್ರನನ್ನು ಹೈಜಾಕ್ ಮಾಡಿ, ಜನರಿಗೆ ತಮ್ಮ ಸಿದ್ದಕಲೆ ದರ್ಶನ ಆಗುತ್ತಿದ್ದಂತೆಯೇ ಈಗ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣುತ್ತೆ. ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ 3ನೇ ಸ್ಥಾನದಲ್ಲಿತ್ತು. ಇಲ್ಲಿ ಕಾಂಗ್ರೆಸ್ 2ನೇ ಸ್ಥಾನಕ್ಕೆ ಬಂದ ಇತಿಹಾಸವೇ ಇಲ್ಲ. ಈಗ ನೋಡಿದರೆ ರಾಜಕೀಯ ಬದುಕು ಕೊಟ್ಟ ಪಕ್ಷವನ್ನೇ ಅವರು ನಿಂದಿಸುತ್ತಿದ್ದಾರೆ ಎಂದು ಹರಿಹಾಯ್ದರು.

ABOUT THE AUTHOR

...view details