ನೆಲಮಂಗಲ :3 ವರ್ಷದಲ್ಲಿ ಪೂರ್ಣವಾಗಬೇಕಿದ್ದ ಎತ್ತಿನಹೊಳೆ ಯೋಜನೆ 12 ವರ್ಷವಾದರೂ ಪೂರ್ಣವಾಗಿಲ್ಲ. 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ. ಮುಂದೆ 50 ಸಾವಿರ ಕೋಟಿ ಆದರೂ ಆಶ್ಚರ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ, ಶ್ರೀಕೃಷ್ಣ ರುಕ್ಮಿಣಿ ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರು ಭಾಗವಹಿಸಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು.
ಮೊದಲಿಗೆ ದೇವರಾಯನದುರ್ಗದಲ್ಲಿ 10 ಟಿಎಂಸಿ ಸಾಮಾರ್ಥ್ಯದ ಜಲಾಶಯ ನಿರ್ಮಾಣದ ಬಗ್ಗೆ ಹೇಳಿದರು, ದೇವರಾಯನ ದುರ್ಗದಲ್ಲಿ ಜಲಾಶಯ ನಿರ್ಮಾಣ ಕಷ್ಟ ಸಾಧ್ಯವೆಂದು ಕೊರಟಗೆರೆ ಬಳಿಯ ಬೈರಗೊಂಡ್ಲು ಬಳಿ 5 ಟಿಎಂಸಿ ಸಾಮಾರ್ಥ್ಯದ ಜಲಾಶಯವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು, ಈಗ 2 ಟಿಎಂಸಿ ಜಲಾಶಯಕ್ಕೆ ಇಳಿಸಿಕೊಂಡಿದ್ದಾರೆ. ಜಲಾಶಯದ ಬಳಿ ಯಾವುದೇ ಕಾಮಗಾರಿ ನಡೆಯದಿದ್ದರೂ ಮುಖ್ಯಮಂತ್ರಿ ಬದಲಾಗುವ ಹಿಂದಿನ ದಿನ 1,500 ಕೋಟಿಗಳ ಮತ್ತೊಂದು ಯೋಜನೆಗೆ ಅಂಕಿತ ಹಾಕಲಾಗಿದೆ ಎಂದರು.