ಬೆಂಗಳೂರು : ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಜನ್ಮದಿನದ ಶುಭಾಶಯ ಕೋರಿದ್ದಾರೆ.
ಸುಧಾಮೂರ್ತಿ ಜನ್ಮದಿನ: ಶುಭ ಕೋರಿದ ಹೆಚ್.ಡಿ.ದೇವೇಗೌಡ - H d deve gowdha news
ಸಮಾಜಕ್ಕೆ ಸುಧಾಮೂರ್ತಿ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಜನ್ಮದಿನದ ಶುಭಾಶಯಗಳು ನಿಮಗೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಶುಭ ಕೋರಿದ್ದಾರೆ.
![ಸುಧಾಮೂರ್ತಿ ಜನ್ಮದಿನ: ಶುಭ ಕೋರಿದ ಹೆಚ್.ಡಿ.ದೇವೇಗೌಡ HD deve gowdha](https://etvbharatimages.akamaized.net/etvbharat/prod-images/768-512-12:37:19:1597820839-kn-bng-03-hdd-wishes-sudhamurti-script-7208083-19082020122352-1908f-1597820032-19.jpg)
HD deve gowdha
ಸಹೋದರಿ ಸುಧಾಮೂರ್ತಿ ಅವರೇ, ಜನ್ಮದಿನದ ಶುಭಾಶಯಗಳು ನಿಮಗೆ. ನೀವು ಎಲ್ಲರಿಗೂ ಸ್ಫೂರ್ತಿದಾಯಕ ಮಹಿಳೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಸಮಾಜಕ್ಕೆ ತಾವು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು, ನಿಮ್ಮ ಮಾರ್ಗದರ್ಶನ ಎಲ್ಲರನ್ನೂ ಯಶಸ್ಸಿನತ್ತ ಮಾರ್ಗದರ್ಶಿಸುತ್ತದೆ. ಮುಂದಿನ ದಿನಗಳು ತಮಗೆ ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಗೌಡರು ಹಾರೈಸಿದ್ದಾರೆ.