ಬೆಂಗಳೂರು: ಎಲ್ಲೆಡೆ ಇಂದು ಹೊಸ ವರ್ಷದ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ನಾಡಿನ ಸಮಸ್ತರಿಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನವ ಜೀವನವನ್ನೇ ಅಲುಗಾಡಿಸಿದ 2020ರ ಕಹಿ ನೆನಪುಗಳು ಮರುಕಳಿಸದಿರಲಿ. 2021ರ ಈ ಹೊಸ ಸಂವತ್ಸರ ನಿಮ್ಮ ಕುಟುಂಬಕ್ಕೆ ಸಂತೋಷ, ಸಮೃದ್ಧಿ, ಯಶಸ್ಸು ತರಲಿ ಎಂದು ಹಾರೈಸಿದ್ದಾರೆ.