ಬೆಂಗಳೂರು:ಸಂಕಷ್ಟದಲ್ಲಿರುವ ಜಿಮ್ ಮಾಲೀಕರ ನೆರವಿಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘವು ಮನವಿ ಮಾಡಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಕರ್ನಾಟಕ ಜಿಮ್ ಮತ್ತು ಫಿಟ್ನೆಸ್ ಮಾಲಿಕರ ಸಂಘದ ಅಧ್ಯಕ್ಷ ಎ.ವಿ. ರವಿ, ಲಾಕ್ಡೌನ್ನಿಂದ ಎಲ್ಲಾ ಜಿಮ್ ಮಾಲೀಕರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಬಾಡಿಗೆ, ವಿದ್ಯುತ್ ದರ ಪಾವತಿಗೆ, ನಿರ್ವಹಣೆ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಹೀಗಾಗಿ ಹಲವು ಸಮುದಾಯಕ್ಕೆ ನೀಡಿದ ವಿಶೇಷ ಪ್ಯಾಕೇಜ್ ತಮಗೂ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಜಿಮ್ ನಡೆಸುವವರು, ಜಿಮ್ ತರಬೇತುದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಮ್ ಬಾಡಿಗೆ ಕಟ್ಟುವುದಕ್ಕೆ ಆಗುತ್ತಿಲ್ಲ, ವಿದ್ಯುತ್ ದರ ಕಟ್ಟುವುದಕ್ಕೆ ಆಗುತ್ತಿಲ್ಲ, ಕುಟುಂಬ ನಡೆಸುವುದಕ್ಕೆ ಕಷ್ಟ ಆಗುತ್ತಿದೆ. ನಾವು ಸಮಾಜದ ಆರೋಗ್ಯವನ್ನು ಹೆಚ್ಚು ಮಾಡುವವರು. ಎಲ್ಲರಂತೆ ತಮಗೂ ಅನುದಾನ ಕೊಡಿ ಎಂದು ಕೋರಿದ್ದಾರೆ.
ನಾವು ಸರ್ಕಾರಕ್ಕೆ ಜಿಎಸ್ಟಿ ಕಟ್ಟುತ್ತೇವೆ, ಸರ್ಕಾರದ ಅನುಮತಿ ಇದೆ. ದಯವಿಟ್ಟು ನಮಗೂ ಏನಾದ್ರು ಪ್ಯಾಕೇಜ್ ಕೊಡಿ. ಜಿಮ್ ಓಪನ್ ಮಾಡುವುದಕ್ಕೆ ಸರ್ಕಾರದ ಅನುಮತಿ ಇಲ್ಲ, ನಾವು ಓಪನ್ ಮಾಡಲ್ಲ. ಸರ್ಕಾರಕ್ಕೆ ನಾವು ಬೆಂಬಲ ಕೊಡುತ್ತೇವೆ. ಕೊರೊನಾ ಪರಿಸ್ಥಿತಿ ನಮಗೂ ಅರ್ಥ ಆಗುತ್ತದೆ. ನಮಗೂ ಏನಾದರೂ ವಿಶೇಷ ಪ್ಯಾಕೇಜ್ ಬಿಡುಗಡೆ್ದುಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.