ಕರ್ನಾಟಕ

karnataka

ETV Bharat / state

108 ಆರೋಗ್ಯ ಕವಚ ಸಿಬ್ಬಂದಿಗೆ ಇಲ್ಲದ ದಸರಾ ಹಬ್ಬದ ಸಂಭ್ರಮ : ಎರಡು ತಿಂಗಳಿಂದ ಸಂಬಳ ನೀಡದ ಜಿವಿಕೆ ಸಂಸ್ಥೆ - ಈಟಿವಿ ಭಾರತ ಕನ್ನಡ

ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದರೂ ಆರೋಗ್ಯ ಕವಚದ ಅಡಿ ಕೆಲಸ ಮಾಡುತ್ತಿರುವ ಮೂರು ಸಾವಿರ ಸಿಬ್ಬಂದಿಗೆ ಎರಡು ತಿಂಗಳ ವೇತನ ಆಗಿಲ್ಲ ಎಂದು ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ತಿಳಿಸಿದ್ದಾರೆ.

gvk-has-not-paid-salaries-for-two-months-to-ambulance-workers
108 ಆರೋಗ್ಯ ಕವಚ ಸಿಬ್ಬಂದಿಗಳಿಗೆ ಇಲ್ಲದ ದಸರಾ ಹಬ್ಬದ ಸಂಭ್ರಮ

By

Published : Oct 4, 2022, 6:31 PM IST

Updated : Oct 4, 2022, 7:16 PM IST

ಬೆಂಗಳೂರು : 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ ದಸರಾ ಹಬ್ಬದ ಸಂಭ್ರಮ ಇಲ್ಲದಂತಾಗಿದ್ದು,ಈ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ವೇತನ ಆಗಿಲ್ಲ ಎಂದು ತಿಳಿದು ಬಂದಿದೆ.

ನಾಡಿನ ಎಲ್ಲರ ಮನೆಯಲ್ಲಿ ನಾಡಹಬ್ಬದ ಆಚರಣೆ ನಡೆಯುತ್ತಿದ್ದರೂ ಆಯುಧ ಪೂಜೆಯ ಸಂಭ್ರಮ 108 ಸಿಬ್ಬಂದಿಗಳ ಮನೆಗಳಲ್ಲಿ ಇಲ್ಲದಾಗಿದೆ. ಆರೋಗ್ಯ ಕವಚದ ಅಡಿ ಮೂರು ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದ ಎರಡು ತಿಂಗಳುಗಳಿಂದ ತಾವು ಕೆಲಸ ಮಾಡುತ್ತಿರುವ ಜಿವಿಕೆ ಕಂಪನಿಯು ನೌಕರರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಬಳ ನೀಡಿಲ್ಲ ಎಂದು ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ತಿಳಿಸಿದ್ದಾರೆ.

108 ಆರೋಗ್ಯ ಕವಚ ಸಿಬ್ಬಂದಿಗೆ ಇಲ್ಲದ ದಸರಾ ಹಬ್ಬದ ಸಂಭ್ರಮ : ಎರಡು ತಿಂಗಳಿಂದ ಸಂಬಳ ನೀಡದ ಜಿವಿಕೆ ಸಂಸ್ಥೆ

108 ಆರೋಗ್ಯ ಕವಚ ಸಿಬ್ಬಂದಿಗೆ ಆಗದ ವೇತನ : ಈ ಬಗ್ಗೆ ರಾಜ್ಯ ಸರ್ಕಾರ 25 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದರೂ, ಕಂಪನಿ ಮಾತ್ರ ಸಂಬಳ ಬಿಡುಗಡೆ ಮಾಡಿಲ್ಲ.ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಗಮನವಹಿಸಬೇಕು. ಎರಡು ದಿನದಲ್ಲಿ ಸಂಬಳ ಬಿಡುಗಡೆ ಮಾಡುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

2ನೇ ತ್ರೈಮಾಸಿಕದಲ್ಲಿಯೇ ಅನುದಾನ ಬಿಡುಗಡೆ: 108 ಆರೋಗ್ಯ ಕವಚ ಸೇವೆಗೆ 2022-23 ನೇ ಸಾಲಿನ 2ನೇ ತ್ರೈಮಾಸಿಕದಲ್ಲಿ 24,99,97,000 ರೂಪಾಯಿ ಅನುದಾನವನ್ನು ಲೆಕ್ಕ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

108 ಆರೋಗ್ಯ ಕವಚ ಸಿಬ್ಬಂದಿಗಳಿಗೆ ಇಲ್ಲದ ದಸರಾ ಹಬ್ಬದ ಸಂಭ್ರಮ

ಸೆಪ್ಟೆಂಬರ್ ಅಂತ್ಯದವರೆಗಿನ ವೆಚ್ಚ ನಿರ್ವಹಣೆ : ಕರಾರು ಒಪ್ಪಂದದನ್ವಯ ಎರಡನೇ ತ್ರೈಮಾಸಿಕಕ್ಕೆ ಅರ್ಹ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ. ಈ ಅನುದಾನವನ್ನು ಸೆಪ್ಟೆಂಬರ್ 2022 ರ ಅಂತ್ಯದವರೆಗಿನ ವೇತನ, ವಿಮೆ, ವಾಹನಗಳ ರಿಪೇರಿ ಮತ್ತು ದುರಸ್ತಿ, ಇಂಧನ ಹಾಗೂ ಇನ್ನಿತರ ವೆಚ್ಚಗಳನ್ನು ನಿರ್ವಹಣೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ಅರ್ಧ ವರ್ಷ ಕಳೆದರೂ ವಿಶೇಷ ಅಭಿವೃದ್ಧಿ ಯೋಜನೆಯತ್ತ ಬೊಮ್ಮಾಯಿ‌ ಸರ್ಕಾರಕ್ಕಿಲ್ಲ ಕಾಳಜಿ!

Last Updated : Oct 4, 2022, 7:16 PM IST

ABOUT THE AUTHOR

...view details