ಕರ್ನಾಟಕ

karnataka

ETV Bharat / state

ವಿಜೃಂಭಣೆಯಿಂದ ಜರುಗಿದ ಗುರುಪೂರ್ಣಿಮೆ.. ಕಣ್ಮನ ಸೆಳೆದ ಶಿರಡಿ ಸಾಯಿ ನಿಜರೂಪದ ಪ್ರತಿಮೆ.. - ವಿಜ್ರಂಭಣೆಯಿಂದ ಜರುಗಿದ ಗುರುಪೂರ್ಣಿಮೆ,ಶ್ರೀ ಸತ್ಯಗಣಪತಿ ಶಿರಡಿ ಸಾಯಿಬಾಬಾ ದೇವಸ್ಥಾನ, ಜೆ.ಪಿ ನಗರದ 6 ನೇ ಹಂತ,  ಬೆಂಗಳೂರು, ಶಿರಡಿ ಸಾಯಿ ಬಾಬಾ, ನಿಜರೂಪದ ದರ್ಶನ ನೀಡುವ ಮೇಣದ ಪ್ರತಿಮೆ, ಕನ್ನಡ ವಾರ್ತೆ, ಈ ಟಿವಿ ಭಾರತ

ಭಕ್ತರುಗಳಿಗೆ ಹೊಸ ಅನುಭವವನ್ನು ನೀಡುವುದು ನಮ್ಮ ಉದ್ದೇಶ. ಬೇರೆ ಯಾವುದೇ ದೇವಸ್ಥಾನವೂ ಸಾಟಿಯಿಲ್ಲದ ರೀತಿಯಲ್ಲಿ ನಮ್ಮ ದೇವಸ್ಥಾನವನ್ನು ಅಲಂಕಾರ ಮಾಡಿದ್ದೇವೆ. ಅಲ್ಲದೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಗರದ ಭಕ್ತರುಗಳಿಗೆ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡಲು, ಜೀವ ಕಳೆಯನ್ನು ಹೊಂದಿರುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದೇವೆ. ಹಾಗೆಯೇ, ಪ್ರತಿಮೆ ಪ್ರತಿಷ್ಠಾನೆಯ ಕೋಣೆಯನ್ನು ಸೌಂಡ್ ಪ್ರೂಫ್ ಆಗಿ ನಿರ್ಮಿಸಿದ್ದೇವೆ. ಈ 900 ಅಡಿಗಳ ಅಗಲದ ಧ್ಯಾನ ಮಂದಿರದಲ್ಲಿ ಭಕ್ತರುಗಳು ತಮ್ಮ ಅನುಕೂಲದಷ್ಟು ಸಮಯವನ್ನು ಧ್ಯಾನದಲ್ಲಿ ಕಳೆಯಬಹುದಾಗಿದೆ ಎಂದು ಟ್ರಸ್ಟಿ ರಾಜ್ ಮೋಹನ್ ರಾಜ್ ಹೇಳಿದರು.

ವಿಜ್ರಂಭಣೆಯಿಂದ ಜರುಗಿದ ಗುರುಪೂರ್ಣಿಮೆ

By

Published : Jul 16, 2019, 7:48 PM IST

ಬೆಂಗಳೂರು: ಜೆಪಿನಗರದ 6ನೇ ಹಂತದಲ್ಲಿರುವ ಶ್ರೀ ಸತ್ಯಗಣಪತಿ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.

ಶಿರಡಿ ಸಾಯಿ ಬಾಬಾ ಸನ್ನಿಧಾನ ಹೊರತುಪಡಿಸಿದರೆ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಅಲಂಕಾರವನ್ನು ಬೆಂಗಳೂರಿನ ಈ ದೇವಸ್ಥಾನದಲ್ಲಿ ಮಾಡಲಾಗಿತ್ತು. ರಾಜ್ಯದಲ್ಲಿಯೇ ಮೊತ್ತಮೊದಲ ಬಾರಿಗೆ ಎಂಬಂತೆ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು.

ಶ್ರೀಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ರಾಮ್ ಮೋಹನ ರಾಜ್ ಮಾತನಾಡಿ, ಪ್ರತಿ ಬಾರಿಯೂ ಗುರುಪೂರ್ಣಿಮೆಯ ಸಂದರ್ಭದಲ್ಲಿ ಭಕ್ತರುಗಳಿಗೆ ಹೊಸ ಅನುಭವವನ್ನು ನೀಡುವುದು ನಮ್ಮ ಉದ್ದೇಶ. ಬೇರೆ ಯಾವುದೇ ದೇವಸ್ಥಾನವೂ ಸಾಟಿಯಿಲ್ಲದ ರೀತಿಯಲ್ಲಿ ನಮ್ಮ ದೇವಸ್ಥಾನವನ್ನು ಅಲಂಕಾರ ಮಾಡಿದ್ದೇವೆ. ಅಲ್ಲದೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಗರದ ಭಕ್ತರುಗಳಿಗೆ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡಲು ಜೀವ ಕಳೆಯನ್ನು ಹೊಂದಿರುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದೇವೆ. ಹಾಗೆಯೇ, ಪ್ರತಿಮೆ ಪ್ರತಿಷ್ಠಾಪನೆಯ ಕೋಣೆಯನ್ನು ಸೌಂಡ್ ಪ್ರೂಫ್ ಆಗಿ ನಿರ್ಮಿಸಿದ್ದೇವೆ. ಈ 900 ಅಡಿಗಳ ಅಗಲದ ಧ್ಯಾನ ಮಂದಿರದಲ್ಲಿ ಭಕ್ತರುಗಳು ತಮ್ಮ ಅನುಕೂಲದಷ್ಟು ಸಮಯವನ್ನು ಧ್ಯಾನದಲ್ಲಿ ಕಳೆಯಬಹುದಾಗಿದೆ. ಅಲ್ಲದೆ ದೇವಸ್ಥಾನವನ್ನು ತೆಂಗಿನ ಕಾಯಿ, ಫಲಪುಷ್ಪಾದಿಗಳಿಂದ ಅಲಂಕರಿಸಲಾಗಿದೆ. 20ಕ್ಕೂ ಹೆಚ್ಚು ಕಲಾವಿದರು ಕಳೆದ 7 ದಿನಗಳಿಂದ ಶ್ರಮವಹಿಸಿ ಈ ಅಲಂಕಾರವನ್ನು ಮಾಡಿದ್ದಾರೆ ಎಂದರು.

ವಿಜೃಂಭಣೆಯಿಂದ ಜರುಗಿದ ಗುರುಪೂರ್ಣಿಮೆ

ಬೆಳಗ್ಗೆ 6ಗಂಟೆಗೆ ಸಾಮೂಹಿಕ ಅಭಿಷೇಕದಿಂದ ಪ್ರಾರಂಭವಾದ ವಿಶೇಷ ಕಾರ್ಯಕ್ರಮಗಳು, ದತ್ತಾತ್ರೇಯ ಅಭಿಷೇಕ, ಫಲಪಂಚಾಮೃತ ಅಭಿಷೇಕ ಮತ್ತು ಸಾಮೂಹಿಕ ಹಾಲಿನ ಅಭಿಷೇಕ ನಡೆಯಿತು. ಅಲ್ಲದೆ ಸುದರ್ಶನ ಹೋಮ ಮತ್ತು ಸಾಯಿನಾಥ ಹೋಮವನ್ನು ನಡೆಸಲಾಯಿತು. ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಿತು.

ABOUT THE AUTHOR

...view details