ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ವಿದೇಶದಿಂದ ಕೊರಿಯರ್ ಮೂಲಕ ಗನ್ಗಳು ಬಂದಿದ್ದು, ಕೆಲಕಾಲ ಆತಂಕವನ್ನುಂಟು ಮಾಡಿತ್ತು.
ಏರ್ಪೋರ್ಟ್ ಕಾರ್ಗೋ ವಿಭಾಗಕ್ಕೆ ಟರ್ಕಿ ದೇಶದಿಂದ ಪಾರ್ಸಲ್ ಬಂದಿದ್ದು, ಅನುಮಾನಾಸ್ಪದವಾಗಿ ಕಂಡ ಪಾರ್ಸಲ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಬಿಚ್ಚಿ ನೋಡಿದಾಗ ಗನ್ಗಳು ಕಂಡಿವೆ. ಅರೆಕ್ಷಣ ಅಧಿಕಾರಿಗಳು ಗಾಬರಿಯಾಗಿದ್ದು, ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಡಮ್ಮಿ ಗನ್ ಅನ್ನೋದು ಗೊತ್ತಾಗಿದೆ. ಸೆಮಿ ಆಟೋಮ್ಯಾಟಿಕ್ ಟಾಯ್ ಗನ್ಗಳಾಗಿದ್ದು, ಸಿನಿಮಾ ಶೂಟಿಂಗ್ ಉದ್ದೇಶಕ್ಕಾಗಿ ಟರ್ಕಿ ದೇಶದಿಂದ ತರಿಸಿಕೊಳ್ಳಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.