ಬೆಂಗಳೂರು: "ಗನ್ ಹಿಡಿದರೆ ಫೀಲ್ ಬೇರೆ" ಎನ್ನುತ್ತಾ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಫ್ತಾ ವಸೂಲಿ ಮಾಡ್ತಿದ್ದ ರೌಡಿಶೀಟರ್ ಮಧುಸೂಧನ್ ಅಲಿಯಾಸ್ ಗನ್ ಮಧುನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಜೈಲಿಂದ ರಿಲೀಸ್ ಆಗಿ ಹೊರಬಂದಿದ್ದ ಆರೋಪಿ ಕಳ್ಳತನ ಎಸಗಲು ಇಳಿದಾಗ ಹೆಡೆಮುರಿ ಕಟ್ಟಿದ್ದಾರೆ.
ಕೊಲೆ ಕೇಸ್ನಿಂದ ಹೊರಬಂದ ನಂತರ ರಾಬರಿಗೆ ಇಳಿದಿದ್ದ ಮಧು ಮತ್ತು ಆತನ ಬಳಿಯಿದ್ದ ಪಿಸ್ತೂಲ್ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣನಕುಂಟೆ ರೌಡಿಶೀಟರ್ ಆಗಿದ್ದ ಮಧುಸೂದನ್ ಅಲಿಯಾಸ್ ಗನ್ ಮಧು ಜಂಬೂಸವಾರಿ ದಿಣ್ಣೆಯಲ್ಲಿ ದರೋಡೆಗೆ ನಿಂತಿದ್ದ ವೇಳೆ ವಶಕ್ಕೆ ಪಡೆದಿದ್ದರು. ಜೈಲಿಗೆ ಹೋಗಿ ಬಂದಿದ್ದಕ್ಕೆ ಹಣಕಾಸಿನ ತೊಂದರೆಯಾಗಿತ್ತು. ಈ ಕಾರಣಕ್ಕೆ ಮತ್ತೆ ಗನ್ ಹಿಡಿದಿದ್ದೆ ಎಂದ ಮಧು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.