ಬೆಂಗಳೂರು :ವ್ಯಾಪಾರದಲ್ಲಿ ನಷ್ಟವಾದ ಕಾರಣ ಕಾರ್ಖಾನೆ ಮಾಲೀಕನೊಬ್ಬ ನೇಣಿಗೆ ಶರಣಾದ ಘಟನೆ ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮೂಡಬಿದರೆಯ ಪ್ರಮೋದ್ ಹೆಗಡೆ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯಲ್ಲಿ ಶನಿವಾರ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ ಹಾಗೂ 15 ವರ್ಷದ ಮಗುವಿದೆ. ಪ್ರಮೋದ್ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಗಮ್ ಕಾರ್ಖಾನೆ ಮತ್ತು ಚಿಕ್ಕ ಟ್ರಾವೆಲ್ ಏಜೆನ್ಸಿ ಇಟ್ಟುಕೊಂಡಿದ್ದರು.