ಕರ್ನಾಟಕ

karnataka

ETV Bharat / state

ಬಲವಂತದ ಮತಾಂತರ ಭೀತಿ: ರಾಜ್ಯದ ಚರ್ಚ್​​ಗಳ ಸರ್ವೆ ನಡೆಸಲು ಗೂಳಿಹಟ್ಟಿ ನೇತೃತ್ವದ ಸಮಿತಿ ಶಿಫಾರಸು! - churches survey

ಬಲವಂತದ ಮತಾಂತರ ಹಾವಳಿ ನಿಯಂತ್ರಿಸಲು ರಾಜ್ಯದಲ್ಲಿನ ಅಕ್ರಮ ಚರ್ಚ್​​ಗಳ ಬಗ್ಗೆ ಸರ್ವೆ ನಡೆಸುವಂತೆ ಗೂಳಿಹಟ್ಟಿ ಶೇಖರ್ ನೇತೃತ್ವದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

gulihatti shekhar headed committee recommends for churches survey
ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯೆ

By

Published : Oct 16, 2021, 7:50 PM IST

ಬೆಂಗಳೂರು:ರಾಜ್ಯದಲ್ಲಿನ ಅಕ್ರಮ ಚರ್ಚ್​​ಗಳ ಬಗ್ಗೆ ಸರ್ವೆ ನಡೆಸುವಂತೆ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆ ಮೂಲಕ ಬಲವಂತದ ಮತಾಂತರ ಹಾವಳಿ ನಿಯಂತ್ರಿಸಲು ಶಿಫಾರಸು ಮಾಡಿದೆ.

ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯೆ

ಸಮಿತಿ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಕ್ರಮ ಚರ್ಚ್​​ಗಳ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಅನಧಿಕೃತ ಚರ್ಚ್​​ಗಳನ್ನು ಸರ್ವೆ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ರಾಜ್ಯದಲ್ಲಿ ಇರುವ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್ ಮಿಷನರಿಗಳು, ಈ ಮಿಷನರಿಗಳು ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು ಹಾಗೂ ಕ್ರಿಶ್ಚಿಯನ್ ಮಿಷನರಿಗಳ ನೋಂದಣಿ ಪ್ರಕ್ರಿಯೆ, ಅಕ್ರಮ ಚರ್ಚ್​​ಗಳಿಂದ ಆಗುತ್ತಿರುವ ಮತಾತಂತರಗಳ ಸಂಬಂಧಿಸಿ ಸಮಾಲೋಚನೆ ನಡೆಸಲಾಯಿತು. ಸಮಿತಿ ಸಭೆಯಲ್ಲಿ ಪುಟ್ಟರಂಗ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್, ವಿರೂಪಾಕ್ಷಪ್ಪ ಬಳ್ಳಾರಿ, ರಾಜೇಶ್ ನಾಯ್ಕ್ ಸೇರಿದಂತೆ ಇತರರು ಭಾಗಿಯಾಗಿದ್ದರು.

ಚರ್ಚ್​​ಗಳ ಸರ್ವೆ ನಡೆಸಲು ಶಿಫಾರಸು:

ಸಮಿತಿ ಸಭೆಯಲ್ಲಿ ಚರ್ಚ್​​ಗಳ ಸರ್ವೆ ನಡೆಸಿ, ಅನಧಿಕೃತ ಚರ್ಚ್​​ಗಳನ್ನು ಪತ್ತೆ ಹಚ್ಚುವಂತೆ ಶಿಫಾರಸು ಮಾಡಲಾಗಿದೆ. ಕೆಲವೆಡೆ ಮನೆಗಳನ್ನು ಚರ್ಚ್​​ಗಳನ್ನಾಗಿ ಪರಿವರ್ತಿಸಿ, ಅಲ್ಲಿ ಬಲವಂತದ ಮತಾಂತರ ನಡೆಸಲಾಗುತ್ತಿರುವ ಬಗ್ಗೆ ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ವೆ ಮೂಲಕ ಹೀಗಾಗಿ ಅನಧಿಕೃತ ಚರ್ಚ್​​ಗಳನ್ನು ಪತ್ತೆ ಹಚ್ಚಿ, ಅಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಧರ್ಮಗುರುಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಮಿತಿ ಅಧ್ಯಕ್ಷ ಗೂಳಿಹಟ್ಟಿ ಶೇಖರ್, ಎಷ್ಟು ಅಧಿಕೃತ, ಅನಧಿಕೃತ ಚರ್ಚ್​​ಗಳಿವೆ ಎಂಬ ಬಗ್ಗೆ ಮಾಹಿತಿ ಕೇಳಿದ್ದೇವೆ. ಕೆಲವು ಕಡೆ ಗಲಾಟೆಗಳಾಗಿವೆ. ಇದನ್ನ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿದ್ದಾರೆ. ಅನಧಿಕೃತ ಚರ್ಚ್​​ಗಳಲ್ಲಿಯೇ ಗಲಾಟೆಗಳಾಗಿವೆ. ನಾವು ಎಲ್ಲ ಇಲಾಖೆ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಶೇಕಡಾ 40 ರಷ್ಟು ಅನಧಿಕೃತ ಚರ್ಚ್​​ಗಳಿವೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 1790 ಚರ್ಚ್​​ಗಳಿವೆ. ಈ ಬಗ್ಗೆ ಅಂಕಿ ಅಂಶಗಳನ್ನು ಕಲೆ ಹಾಕುತ್ತಿದ್ದೇವೆ ಎಂದರು.

ಬಲವಂತದ ಮತಾಂತರ ಆಗುತ್ತಿರುವ ಬಗ್ಗೆ ಬೆಳಕಿಗೆ ಬರುತ್ತಿದೆ. ರಾಜ್ಯದಲ್ಲಿ 36 ಬಲವಂತ ಮತಾಂತರದ ಪ್ರಕರಣಗಳು ದಾಖಲಾಗಿವೆ. ಕೆಲವು ಕಡೆ ಮನೆಗಲ್ಲೇ ಚರ್ಚ್​​ಗಳನ್ನು ನಡೆಸುತ್ತಿದ್ದು, ಇದು ಅನಧಿಕೃತ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಬಲವಂತದ ಮತಾಂತರ ತಡೆಯುವಂತೆ ಕ್ರಮ ವಹಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಿದ್ದೇವೆ ಎಂದರು.

ಮತಾಂತರಿಗಳಿಂದ ಸವಲತ್ತು ಹಿಂಪಡೆಯಲೂ ಶಿಫಾರಸು:

ಇನ್ನು ಯಾರೂ ಬಲವಂತದಿಂದ ಮತಾಂತರಗೊಂಡ ಬಳಿಕನೂ ಸರ್ಕಾರಿ ಸವಲತ್ತು ಪಡೆಯುತ್ತಿರುವವರ ಸಂಬಂಧ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಎಸ್​​ಸಿ, ಎಸ್​​ಟಿ, ಹಿಂದುಳಿದ ವರ್ಗಗಳ ಸಮುದಾಯದವರನ್ನು ಗುರಿಯಾಗಿಸಿ ಬಲವಂತದ ಮತಾಂತರ ಮಾಡುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಹೀಗೆ ಬಲವಂತವಾಗಿ ಮತಾಂತರವಾಗುತ್ತಾರೋ ಅಂತವರಿಂದ ಸರ್ಕಾರದ ಸವಲತ್ತುಗಳನ್ನ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಮಿತಿ ಮುಂದಾಗಿದೆ.

ಎಸ್​​ಸಿ, ಎಸ್​​ಟಿ ,ಹಿಂದುಳಿದ ಸಮುದಾಯದವರು ಮತಾಂತರವಾದ ಬಳಿಕನೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವ ಬಗ್ಗೆ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತವರು ಪಡೆಯುತ್ತಿರುವ ಎಸ್​​ಸಿ, ಎಸ್​​ಟಿ ಸೌಲಭ್ಯಗಳನ್ನು ಹಿಂಪಡೆಯಬೇಕು. ಯಾವ ಧರ್ಮಕ್ಕೆ ಮತಾಂತರ ಆಗಿರುತ್ತಾರೋ, ಅವರು ಆ ಧರ್ಮದ ಸೌಲಭ್ಯಗಳ‌ನ್ನ ಮಾತ್ರ ಪಡೆಯಬೇಕು ಎಂಬ ಬಗ್ಗೆನೂ ಸಮಿತಿ ಶಿಫಾರಸು ಮಾಡಲು ನಿರ್ಧರಿಸಿದೆ.

ABOUT THE AUTHOR

...view details