ಕರ್ನಾಟಕ

karnataka

ETV Bharat / state

ಮಗಳ ಮೇಲೆ ಅತ್ಯಾಚಾರ: ಅಪರಾಧಿ ತಂದೆಗೆ 20 ವರ್ಷ ಜೈಲು ಶಿಕ್ಷೆ, ದಂಡ - ಅಪರಾಧಿ ತಂದೆಗೆ ಜೈಲು ಶಿಕ್ಷೆ

2015ರಲ್ಲಿ ಪತ್ನಿ ಸಂಬಂಧಿಕರನ್ನು ಕಾಣಲು ಊರಿಗೆ ತೆರಳಿದ್ದ ವೇಳೆ ಪಾಪಿ ತಂದೆ ತನ್ನ ಅಪ್ರಾಪ್ತ ಮಗಳನ್ನು ಮನೆಯಲ್ಲಿ ಕೂಡಿಟ್ಟು ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ.

ಮಗಳ ಮೇಲೆ ಅತ್ಯಾಚಾರ: ಅಪರಾಧಿ ತಂದೆಗೆ 20 ವರ್ಷ ಜೈಲು ಶಿಕ್ಷೆ, ದಂಡ
ಮಗಳ ಮೇಲೆ ಅತ್ಯಾಚಾರ: ಅಪರಾಧಿ ತಂದೆಗೆ 20 ವರ್ಷ ಜೈಲು ಶಿಕ್ಷೆ, ದಂಡ

By

Published : Apr 7, 2022, 8:13 PM IST

ಬೆಂಗಳೂರು:ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಪಾಪಿ ತಂದೆಗೆ ಬೆಂಗಳೂರು ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ. ಬಿಹಾರ ಮೂಲದ ಸರ್ವೇಶ್ ರವಿದಾಸ್ (44) ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿ.

ಸರ್ವೇಶ್ ರವಿದಾಸ್ ತನ್ನ ಪತ್ನಿ ಹಾಗೂ 12 ವರ್ಷದ ಮಗಳೊಂದಿಗೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. 2015ರಲ್ಲಿ ಪತ್ನಿ ಸಂಬಂಧಿಕರನ್ನು ಕಾಣಲು ಊರಿಗೆ ತೆರಳಿದ್ದ ವೇಳೆ ಪಾಪಿ ತನ್ನ ಅಪ್ರಾಪ್ತ ಮಗಳನ್ನು ಮನೆಯಲ್ಲಿ ಕೂಡಿಟ್ಟು ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನಂತರ ಸಹಾಯವಾಣಿ ಅಧಿಕಾರಿಗಳು ಬಾಲಕಿ ರಕ್ಷಿಸಿದ್ದರು.

ಬಳಿಕ ಮಕ್ಕಳ ಸಹಾಯವಾಣಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಎಚ್ಎಎಲ್ ಠಾಣೆ ಪೊಲೀಸರು ಆರೋಪಿ ಸರ್ವೇಶ್​ನ್ನು ಬಂಧಿಸಿ, ಐಪಿಸಿ 376 ಹಾಗೂ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರು. ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನಗರದ 2ನೇ ತ್ವರಿಗತಿ ನ್ಯಾಯಾಲಯದ ನ್ಯಾಯಾಧೀಶ ಎ.ಜಿ.ಗಂಗಾಧರ್ ಅವರು ಈ ತೀರ್ಪು ನೀಡಿದ್ದಾರೆ. ಹಾಗೆಯೇ, ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ 4 ಲಕ್ಷ ರೂ. ವಿತರಿಸುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ವಿ ಅಶ್ವತ್ಥನಾರಾಯಣಗೌಡ ವಾದ ಮಂಡಿಸಿದ್ದರು.

ಇದನ್ನೂ ಓದಿ:ಸೌಂಡ್​ ಬಾಕ್ಸ್​​ನಲ್ಲಿ 12 ಕೋಟಿ ಮೌಲ್ಯದ ಹೆರಾಯಿನ್ ಸಾಗಾಟ: ಗಂಡ-ಹೆಂಡ್ತಿ ಸೆರೆ

ABOUT THE AUTHOR

...view details