ಕರ್ನಾಟಕ

karnataka

ETV Bharat / state

ಅರ್ಹತೆ ಮೇಲೆ ಅತಿಥಿ ಉಪನ್ಯಾಸಕರ ನೇಮಕವಾಗ್ದಿದ್ರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ: ಆಯನೂರು - ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಯನೂರು ಮಂಜುನಾಥ್

ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತೆಯ ಆಧಾರದ ಮೇರೆಗೆ ರಾಜ್ಯ ಸರ್ಕಾರ ನೇಮಕ ಮಾಡಿ ಕೊಳ್ಳದೆ ಹೋದರೆ ರಾಜ್ಯ ಸರ್ಕಾರದ ವಿರುದ್ದವೇ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ವಿಧಾನಸಭ ಸದಸ್ಯ ಆಯನೂರು ಮಂಜುನಾಥ್ ಸರ್ಕಾರಕ್ಕೆ‌ ಖಡಕ್ ಎಚ್ಷರಿಕೆ ನೀಡಿದ್ದಾರೆ.

ಅರ್ಹತೆ ಆಧಾರದಲ್ಲಿ ಅತಿಥಿ ಉಪನ್ಯಾಸಕರ ನೇಮಕ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಯನೂರು ಮಂಜುನಾಥ್

By

Published : Nov 4, 2019, 10:05 PM IST

ಬೆಂಗಳೂರು: ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತೆಯ ಆಧಾರದ ಮೇರೆಗೆ ನೇಮಕ ಮಾಡಿ ಕೊಳ್ಳದೆ ಹೋದರೆ ರಾಜ್ಯ ಸರ್ಕಾರದ ವಿರುದ್ದವೇ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ವಿಧಾನಸಭ ಸದಸ್ಯ ಆಯನೂರು ಮಂಜುನಾಥ್ ಸರ್ಕಾರಕ್ಕೆ‌ ಖಡಕ್ ಎಚ್ಷರಿಕೆ ನೀಡಿದ್ದಾರೆ.

ತಮ್ಮ‌ಕಚೇರಿಯಲ್ಲಿ ಮಾತನಾಡಿದ ಅವರು ರಾಜ್ಯಾದ್ಯಾಂತ 13 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಈಗ ಸರ್ಕಾರ 1.247 ಉಪನ್ಯಾಸಕರ ನೇಮಕಾತಿಗೆ ಮುಂದಾಗಿದ್ದು, ಈ ನೇಮಕಾತಿಯಲ್ಲಿ ಹೊಸಬರನ್ನು ನಿಯೋಜನೆ ಮಾಡಿ ಕೊಳ್ಳದೆ ಕಳೆದ 15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಅರ್ಹತೆ ಆಧಾರದಲ್ಲಿ ಅತಿಥಿ ಉಪನ್ಯಾಸಕರ ನೇಮಕ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಯನೂರು ಮಂಜುನಾಥ್
ಅತಿಥಿ ಉಪನ್ಯಾಸಕರು ಕೊಲಿ ಕೆಲಸ ಮಾಡುವವರಿಗಿಂತ ಕಡಿಮೆ ಸಂಬಳ ತೆಗೆದು‌ ಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಕನಿಷ್ಠ ವೇತನವನ್ನು‌ ಸಹ ನೀಡುತ್ತಿಲ್ಲ. ರಾಜ್ಯ ಸರ್ಕಾರ ಯುಜಿಸಿ ಆದೇಶದ ಮೇರೆಗೆ ನವೆಂಬರ್ 10 ರ ಒಳಗಡೆ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕಿದೆ. ಇಲ್ಲಿ ಉನ್ನತ ಶಿಕ್ಷಣ ಇಲಾಖೆ ತರಾತುರಿಯ ನಿರ್ಧಾರ ತೆಗದು ಕೊಳ್ಳದೆ ಹಾಲಿ ಇರುವ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯಬೇಕು ಎಂದರು.

For All Latest Updates

ABOUT THE AUTHOR

...view details