ಕರ್ನಾಟಕ

karnataka

ETV Bharat / state

ಮೋದಿ ಬರುತ್ತಿದ್ರೆ ರಾತ್ರೋರಾತ್ರಿ ರಸ್ತೆ ರೆಡಿಯಾಗ್ತಿತ್ತು.. ಈ ರೋಡ್​ ದುರಸ್ತಿ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ - bangalore traffic problem

ಗುಬ್ಬಿ ತೋಟದಪ್ಪ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಬೇಗ ಕೆಲಸ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಪ್ರಧಾನಿ ಮೋದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೆ, ರಾತ್ರಿಯೇ ರೆಡಿ ಆಗ್ತಿತ್ತು. ಆದ್ರೆ ಜನಸಾಮಾನ್ಯರು ತಿಂಗಳುಗಟ್ಟಲೇ ಕಿರಿಕಿರಿ ಅನುಭವಿಸಬೇಕು ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

road white topping work
ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರು ಆಕ್ರೋಶ

By

Published : Nov 24, 2022, 1:15 PM IST

Updated : Nov 25, 2022, 5:12 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಪರಿಣಾಮ ಪ್ರಯಾಣಿಕರು ಟ್ರಾಫಿಕ್ ದಟ್ಟಣೆಯ ಕಿರಿ ಕಿರಿ ಎದುರಿಸುತ್ತಿದ್ದಾರೆ.

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಆಟೋ ಚಾಲಕ ಮಲ್ಲಿಕ್, 'ಪ್ರಧಾನಿ ನರೇಂದ್ರ ಮೋದಿ ಆಗಮದ ಹಿನ್ನೆಲೆ ರಸ್ತೆಯಲ್ಲಿದ್ದ ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲು ಮುಂದಾಗಿದ್ದರು. ನಂತರ ಪ್ರಧಾನಿ ಸಾಗುವ ಮಾರ್ಗ ಬದಲಾಗಿತ್ತು. ಹೀಗಾಗಿ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಬೇಗ ಕೆಲಸ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಈ ಮುಖ್ಯ ರಸ್ತೆಯನ್ನು ಬಂದ್ ಮಾಡಿ ವಾರ ಆಯ್ತು, ಪ್ರಧಾನಿ ಮೋದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೆ ರಾತ್ರಿಯೇ ರಸ್ತೆ ರೆಡಿ ಆಗ್ತಿತ್ತು. ಆದ್ರೆ ಜನಸಾಮಾನ್ಯರು ತಿಂಗಳುಗಟ್ಟಲೇ ಕಿರಿಕಿರಿ ಅನುಭವಿಸಬೇಕು' ಎಂದರು.

ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರು ಆಕ್ರೋಶ

ಆಟೋ ಸವಾರ ಚಂದ್ರಪ್ಪ ಮಾತನಾಡಿ, ಟಾರ್ ರಸ್ತೆಯಲ್ಲಿ ಹಳ್ಳ, ಗುಂಡಿಗಳು ಇದ್ದವು. ಈಗ ವೈಟ್ ಟಾಪಿಂಗ್ ಮಾಡುತ್ತಿದ್ದಾರೆ. ತುಂಬಾ ದಿನದಿಂದ ರಸ್ತೆ ಸಂಚಾರ ಬಂದ್ ಆಗಿದ್ದು, ಟ್ರಾಫಿಕ್ ಸಮಸ್ಯೆ ಆಗಿದೆ. ಪ್ರಧಾನಿ ಮೋದಿ ಓಡಾಡುವ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಯು ತರಾತುರಿಯಲ್ಲಿ ಪ್ರಮುಖ ರಸ್ತೆ ಜಂಕ್ಷನ್ ಬಂದ್​ ಮಾಡಿ ದುರಸ್ತಿ ಕಾರ್ಯಕ್ಕೆ ಮುಂದಾಗಿತ್ತು. ಈಗ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದರು.

ದನ್ನೂ ಓದಿ:ಬಿಬಿಎಂಪಿಯಿಂದ ವೈಟ್ ಟಾಪಿಂಗ್: ಟೆಂಡರ್ ಶ್ಯೂರ್ ರಸ್ತೆಗಳಾಯ್ತು, ಇದೀಗ ಬೆಂಗಳೂರಲ್ಲಿ "ರ‍್ಯಾಪಿಡ್ ರಸ್ತೆ”

ವೈಟ್ ಟಾಪಿಂಗ್ ಕಾಮಗಾರಿ ಆರಂಭ: ಇದೀಗ ಮೆಜೆಸ್ಟಿಕ್ ರಸ್ತೆಯಲ್ಲಿ ಸಂಚಾರ ನಿಷೇಧಿಸಿ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ರೈಲ್ವೆ ನಿಲ್ದಾಣದ ಮುಂಭಾಗದವರೆಗೂ ವೈಟ್ ಟಾಪಿಂಗ್ ಅಳವಡಿಸಿದ್ದು, ಕ್ಯೂರಿಂಗ್ ನಡೆಯುತ್ತಿದೆ. ಮಳೆ ಹಿನ್ನೆಲೆ ಕಾಮಗಾರಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಗುಬ್ಬಿ ತೋಟದಪ್ಪ ರಸ್ತೆಯನ್ನು ಶಾಂತಲಾ ಸಿಲ್ಕ್ ಹೌಸ್ ಸರ್ಕಲ್​ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ವೈಟ್ ಟಾಪಿಂಗ್ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂಜಾನೆಯಿಂದ ತಡರಾತ್ರಿವರೆಗೂ ಈ ರಸ್ತೆಯಲ್ಲಿ ವಾಹನ ಸಂಚಾರ ಇರುತ್ತದೆ. ಆದರೆ ಗುಬ್ಬಿ ತೋಟದಪ್ಪ ರಸ್ತೆ ಬಂದ್ ಮಾಡಿ, ಪಕ್ಕದ ಒನ್ ವೇ ರಸ್ತೆಯಲ್ಲೇ ಬ್ಯಾರಿಕೇಡ್ ಹಾಕಿ, ಎರಡು ವಿಭಾಗ ಮಾಡಿ, ಟು ವೇ ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಶಾಂತಲಾ ವೃತ್ತದಿಂದ ಟ್ಯಾಂಕ್ ಬಂಡ್ ರಸ್ತೆ ಮೂಲಕ ಉಪ್ಪಾರಪೇಟೆ ಪೊಲೀಸ್ ಠಾಣೆ ಪಕ್ಕದ ರಸ್ತೆಯಿಂದ ಧನ್ವಂತರಿ ರಸ್ತೆಗೆ ಸೇರಬೇಕು.

ಇದನ್ನೂ ಓದಿ:ವಿರೋಧ ವ್ಯಕ್ತಪಡಿಸಿ ಸ್ಥಗಿತಗೊಳಿಸಿದ್ದ ಕಾಂಗ್ರೆಸ್​​ ವೈಟ್​​ ಟಾಪಿಂಗ್​​ ಯೋಜನೆಗೆ ಬಿಎಸ್‌ವೈ ಅಸ್ತು!?

ಈ ಧನ್ವಂತರಿ ರಸ್ತೆ ಮೂಲಕವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲು ನಿಲ್ದಾಣಕ್ಕೆ ಹೋಗಬಹುದು. ಮೈಸೂರು ರಸ್ತೆಯಿಂದ ನಗರದ ವಿಧಾನಸೌಧ, ಮಲ್ಲೇಶ್ವರ, ಶೇಷಾದ್ರಿಪುರ, ಸ್ವಾತಂತ್ರ್ಯ ಉದ್ಯಾನವನ, ಹೆಬ್ಬಾಳ ಸೇರಿ ವಿವಿಧ ಮಾರ್ಗಗಳಿಗೆ ಹೋಗುವವರಿಗೆ ಅನಾನುಕೂಲವಾಗಿದೆ. ಜೊತೆಗೆ ಧನ್ವಂತರಿ ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್‌ ಜಾಮ್ ಸಹ ಉಂಟಾಗಿದೆ ಎಂಬುದು ಸಾರ್ವಜನಿಕರ ಅಳಲು.

Last Updated : Nov 25, 2022, 5:12 PM IST

ABOUT THE AUTHOR

...view details