ಬೆಂಗಳೂರು :ಮೇಲ್ಮನೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬೆಂಬಲಿಸುವ ತೀರ್ಮಾನ ಏಕೆ ಕೈಗೊಂಡರೋ ಗೊತ್ತಿಲ್ಲ ಎಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾಕೆ ಈ ರೀತಿ ತೀರ್ಮಾನ ಕೈಗೊಂಡರೋ ಗೊತ್ತಿಲ್ಲ. ಅದನ್ನ ಅವರನ್ನೇ ಕೇಳಬೇಕು. ಯಾಕೆ ಈ ರೀತಿ ನಿರ್ಧರಿಸಿದ್ರೋ ಗೊತ್ತಿಲ್ಲ. ನಾನು ಅಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿಸಿದರು.