ರಾಜ್ಯಕ್ಕೆ ಸಿಹಿ ಸುದ್ದಿ: ಕೇಂದ್ರದಿಂದ ಜಿಎಸ್ಟಿ ಬಾಕಿ ಹಣ ಬಿಡುಗಡೆ.. - ಕೇಂದ್ರ ಸರ್ಕಾರದಿಂದ ಜಿಎಸ್ ಟಿ ಬಾಕಿ ಹಣ ಬಿಡುಗಡೆ
ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಪರಿಹಾರ ಯೋಜನೆಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ರಾಜ್ಯ ಸರಕಾರಕ್ಕೆ ಹಣಕಾಸಿನ ಅಗತ್ಯತೆ ಇದ್ದು, ಇಂತಹ ಸಮಯದಲ್ಲಿ ರಾಜ್ಯಕ್ಕೆ ನೀಡಬೇಕಾಗಿದ್ದ ನವೆಂಬರ್ ತಿಂಗಳ ಜಿಎಸ್ ಟಿ ಬಾಕಿ ಹಣ 1566.82 ಕೋಟಿ ರೂ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಬೆಂಗಳೂರು: ಲಾಕ್ ಡೌನ್ ನಿಂದ ಯಾವುದೇ ಆರ್ಥಿಕ ಚಟುವಟಿಕೆಗಳಿಲ್ಲದೇ ಕಂಗೆಟ್ಟಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ರಾಜ್ಯಕ್ಕೆ ನೀಡಬೇಕಾಗಿದ್ದ ನವೆಂಬರ್ ತಿಂಗಳ ಜಿಎಸ್ ಟಿ ಬಾಕಿ ಹಣ 1566.82 ಕೋಟಿ ರೂ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಪರಿಹಾರ ಯೋಜನೆಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ರಾಜ್ಯ ಸರಕಾರಕ್ಕೆ ಹಣಕಾಸಿನ ಅಗತ್ಯತೆ ಇದ್ದು ಇಂತಹ ಸಮಯದಲ್ಲಿ ಕೇಂದ್ರ ಸರಕಾರ ಜಿಎಸ್ ಟಿ ಕಂತು ಬಿಡುಗಡೆ ಮಾಡಿರುವುದು ರಾಜ್ಯ ಸರಕಾರಕ್ಕೆ ಸಂತಸವನ್ನು ತಂದಿದೆ.
ನವೆಂಬರ್ನಿಂದ ಜನವರಿ ತಿಂಗಳ ವರೆಗೆ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ಟಿ ಹಣ ಬಾಕಿ ಉಳಿಸಿಕೊಂಡಿದ್ದು, ಈಗ ನವೆಂಬರ್ ತಿಂಗಳ ಕಂತಿನ ಹಣವನ್ನ ಸರ್ಕಾರಕ್ಕೆ ಸಂದಾಯ ಮಾಡಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳ ಪಾಲಿನ ಹಣ ಸುಮಾರು 2,800 ಕೋಟಿ ಹಣವನ್ನು ರಾಜ್ಯ ಸರಕಾರ ಬಿಡುಗಡೆ ಮಾಡುವುದು ಬಾಕಿ ಇದೆ. ಈ ಹಣವನ್ನು ಕೇಂದ್ರ ಸರಕಾರ ಏಪ್ರಿಲ್ ಅಂತ್ಯದೊಳಗೆ ಬಿಡುಗಡೆ ಮಾಡುವ ವಿಶ್ವಾಸವನ್ನು ರಾಜ್ಯ ಸರ್ಕಾರ ಹೊಂದಿದೆ.