ಬೆಂಗಳೂರು :ಹಲವು ವಿರೋಧದ ಬಳಿಕ ಗಾರ್ಮೆಂಟ್ಸ್, ಟೆಕ್ಸ್‌ಟೈಲ್ ಮೇಲಿನ GST ದರ ಇಳಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಏರಿಕೆ ಮಾಡಿ ವ್ಯಾಪಾರಿಗಳಿಗೆ ಶಾಕ್ ನೀಡಿದೆ. ಉಡುಪುಗಳು, ಜವಳಿಗಳ ಮೇಲೆ ಜಿಎಸ್‌ಟಿ ದರವನ್ನು ಶೇ.5ರಿಂದ 12ಕ್ಕೇರಿಸಿದೆ.
2022 ಜನವರಿ 1ರಿಂದಲೇ ಜಾರಿಗೆ ಬರುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇದು ಗ್ರಾಹಕರಿಗೂ ಶೇ.7ರಷ್ಟು ಹೊರೆ ಆಗಲಿದೆ. ರೈತರ ಕಾಯ್ದೆ ವಿಚಾರದಲ್ಲಿ ಸರ್ಕಾರ ಯೂಟರ್ನ್ ಪಡೆದಂತೆ ಗಾರ್ಮೆಂಟ್ಸ್ ವಿಚಾರದಲ್ಲೂ ಈ ನಿರ್ಧಾರ ಹಿಂಪಡೆಯಬೇಕೆಂದು ಕರ್ನಾಟಕ ಗಾರ್ಮೆಂಟ್ ಅಸೋಸಿಯೇಷನ್ ಬೆಂಗಳೂರಿನ ಮಾಜಿ ಅಧ್ಯಕ್ಷ ಸಜ್ಜನ್ ರಾಜ್ ಮೆಹ್ತಾ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಗಾರ್ಮೆಂಟ್ಸ್, ಟೆಕ್ಸ್‌ಟೈಲ್ಸ್‌ಗಳ ಮೇಲೆ GST ಏರಿಕೆ ಆಗುತ್ತಿದೆ. ಪ್ರಧಾನಮಂತ್ರಿ, ಸಿಎಂ, ಕೇಂದ್ರ ಹಣಕಾಸು ಸಚಿವರಿಗೆ ಈಗಾಗಲೇ ಮನವಿ ಪತ್ರ ಕಳಿಸಲಾಗಿದೆ. ಜಿಎಸ್‌ಟಿ ಈಗಿರುವ ಪ್ರಕಾರ 999 ರೂ. ಬೆಲೆಯ ಬಟ್ಟೆಗಳ ಮೇಲೆ 5% ಜಿಎಸ್‌ಟಿ, 1000 ರೂ. ಬಟ್ಟೆ ಮೇಲೆ 12% ಜಿಎಸ್‌ಟಿ ಇದೆ.